Kundapra.com ಕುಂದಾಪ್ರ ಡಾಟ್ ಕಾಂ

ನ.6ರಂದು ಗಾನಕುಸುಮ – 2016ರ ಮೊದಲ ಸುತ್ತಿನ ಆಯ್ಕೆಗೆ ಸ್ಪರ್ಧೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕುಸುಮ ಫೌಂಡೇಶನ್ ನಾಗೂರು ಆಶ್ರಯದಲ್ಲಿ ನಡೆಯಲಿರುವ ‘ಕುಸುಮಾಂಜಲಿ-2016’ ರ ಪೂರ್ವಭಾವಿಯಾಗಿ ನಡೆಯಲಿರುವ ಗಾನಕುಸುಮ-2016 ಗಾಯನ ಸ್ಪರ್ಧೆಯ ಮೊದಲ ಸುತ್ತಿನ ಆಯ್ಕೆ ಸ್ಪರ್ಧೆಯು ದಿನಾಂಕ ನವೆಂಬರ್ 6ರ ಭಾನುವಾರ, ಬೆಳಿಗ್ಗೆ 8:30ಕ್ಕೆ ನಾಗೂರಿನ ಶ್ರೀ ಕೃಷ್ಣ ಲಲಿತ ಕಲಾ ಮಂದಿರದಲ್ಲಿ ನಡೆಯಲಿರುವುದು. ಸ್ಪರ್ಧಿಗಳು ಸಮಯಕ್ಕೆ ಸರಿಯಾಗಿ ಹಾಜರಿದ್ದು ಹೆಸರು ನೋಂದಾಯಿಸಿಕೊಳ್ಳುವಂತೆ ಕೋರಲಾಗಿದೆ.

ಸಾಂಸ್ಕೃತಿಕ ಹಾಗೂ ಕಲಾ ಸಿರಿವಂತಿಯ ಸಮ್ಮಿಲನವಾದ ‘ಕುಸುಮಾಂಜಲಿ’ ಗೆ ಪೂರಕವಾಗಿ ಆಯೋಜಿಸಲಾಗುತ್ತಿರುವ ಗಾನಕುಸುಮ ಸ್ವರ್ಧೆಯಲ್ಲಿ ಯಾವುದೇ ಭಾಷೆಯ ಭಾವಗೀತೆ, ಭಕ್ತಿ ಪ್ರಧಾನ ಗೀತೆ, ದೇಶಭಕ್ತಿಗೀತೆ ಹಾಗೂ ಉತ್ತಮ ಅಭಿರುಚಿವುಳ್ಳ ಕಲಾತ್ಮಕ ಚಿತ್ರಗೀತೆಗಳನ್ನು ಆಯ್ದುಕೊಳ್ಳಬಹುದಾಗಿದೆ.

ಸ್ಪರ್ಧೆಯು ಜೂನಿಯರ್ ಮತ್ತು ಸೀನಿಯರ್ ವಿಭಾಗವಾಗಿ ನಡೆಯಲಿದೆ. ಪ್ರತೀ ಸ್ಪರ್ಧಿಗೆ ಪಲ್ಲವಿ ಹಾಗೂ ಒಂದು ಚರಣ ಹಾಡಲು ಅವಕಾಶವಿದ್ದು ಗರಿಷ್ಠ 3 ನಿಮಿಷಗಳ ಕಾಲಾವಕಾಶವಿರುತ್ತದೆ. ಮೊದಲ ಸುತ್ತಿನಲ್ಲಿ 30 ಗಾಯಕರನ್ನು ಸೆಮಿಫೈನಲ್ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 9483130844 ನಂಬರ್‌ಗೆ ಸಂಪರ್ಕಿಸುವಂತೆ ಕುಸುಮಾಂಜಲಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version