Kundapra.com ಕುಂದಾಪ್ರ ಡಾಟ್ ಕಾಂ

ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೂಕಳಂ ಕಾರ‍್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಲಲಿತಾ ಕಲಾ ಸಂಘ ಆಶ್ರಯದಲ್ಲಿ ವಿದ್ಯಾರ್ಥಿಗಳ ಕ್ರೀಯಾಶೀಲ ಚಟುವಟಿಕೆ ಉತ್ತೇಜಿಸುವ ನೆಲೆಯಲ್ಲಿ ಪೂಕಳಂ ಪುಷ್ಪ ರಂಗೋಲಿ ಸ್ಪರ್ಧೆ ಕಾಲೇಜ್ ಸಭಾಂಗಣದಲ್ಲಿ ನಡೆಸಲಾಯಿತು. ಲಲಿತ ಕಲಾ ಸಂಘದ ಸಂಯೋಜಕಿ ಸ್ಫೂರ್ತಿ ಎಸ್. ಫೆರ್ನಾಂಡಿಸ್, ಸಹ ಸಂಯೋಜಕಿ ಅನ್ವಿತಾ ಕಾರ್ಯಕ್ರಮ ಸಂಯೋಜಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ದೋಮ ಚಂದ್ರಶೇಖರ್ ಇದ್ದರು. ಸ್ಪರ್ಧೆಯಲ್ಲಿ ಪ್ರಥಮ ಬಿ.ಕಾಂ. ಡಿ ವಿಭಾಗದ ಶ್ರೇಯಾ ಸೆಬೆಸ್ಟಿನ್, ಹಾಗೂ ದ್ವಿತೀಯ ಬಿ.ಕಾಂ. ಸಿ ವಿಭಾಗದ ಯೋಗಿಶ್ ಸ್ಥಾನಗಳಿಸಿದರು.

Exit mobile version