Kundapra.com ಕುಂದಾಪ್ರ ಡಾಟ್ ಕಾಂ

ಮುಂಬೈನಲ್ಲಿ ಅಖಿಲ ಭಾರತ ಕನ್ನಡ ಪತ್ರಕರ್ತರ ಸಮಾವೇಶಕ್ಕೆ ಚಾಲನೆ

ಮುಂಬೈ: ಕನ್ನಡಿಗರು ಹಾಗೂ ಮರಾಠಿಗರು ಪರಸ್ಪರ ಭಾಂದವ್ಯ ಹಾಗೂ ಸೌಹಾರ್ದತೆಯಿಂದ ಮುಂಬೈಯಿಗರೊಂದಿಗೆ ಬೆರೆತುಹೋಗಿದ್ದಾರೆ. ಪ್ರಾತೀಯ ಭಾವನೆಗಳಿದ್ದರೂ ಏಕತೆಯಿಂದ ಒಂದುಗೂಡಿದ್ದಾರೆ ಎಂದು ಥಾಣೆ ಜಿಲ್ಲೆಯ ಶಾಸಕ ಪ್ರತಾಪ್ ಸರ್ ನಾಯ್ಕ್ ಹೇಳಿದರು.

ಇಲ್ಲಿನ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ರಿ. ಇವರು ಮೂರು ದಿನಗಳ ಕಾಲ ಥಾಣೆಯ ಹೋಟೆಲ್ ಧೀರಜನ ದಿ. ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ವೇದಿಕೆಯಲ್ಲಿ ಆಯೋಜಿಸಿದ ಅಖಿಲ ಭಾರತ ಕನ್ನಡ ಪತ್ರಕರ್ತರ ಸಮಾವೇಶ-2015 ಚಾಲನೆ ನೀಡಿ ಅವರು ಮಾತನಾಡಿದರು.

ಸಮಾವೇಶದ ಅಧ್ಯಕ್ಷತೆಯನ್ನು ಚಂದ್ರಶೇಖರ ಪಾಲೆತ್ತಾಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ. ವಿ. ಪೊನ್ನಪ್ಪ, ಉದಯವಾಣಿ ಸುದ್ದಿ ವಿಭಾಗದ ಮುಖ್ಯಸ್ಥ ಮನೋಹರ ಪ್ರಸಾಸ್, ಮುಂಬೈ ಮರಾಠಿ ಪತ್ರಕಾರ್ ಸಂಘ್ ದ ಅಧ್ಯಕ್ಷ ದೇವದಾಸ್ ಎಲ್. ಮಠಾಲೆ, ಮಂತ್ರಾಲಯ ಮತ್ತು ವಿಧಿ ಮಂಡಳ್ ವಾರ್ತಾಹಾರ್ ಸಂಘದ ಅಧ್ಯಕ್ಷ ಚಂದನ್ ಶಿರ್ವಾಳೆ, ಹಿರಿಯ ಸಾಹಿತಿ ಸುನಿತಾ ಶೆಟ್ಟಿ, ನಾವುಂದ ಶುಭದಾ ಶೈಕ್ಷಣಿಕ ಸಂಸ್ಥೆಯ ಕಾರ್ಯಾಧ್ಯಕ್ಷ ಎನ್. ಕೆ. ಬಿಲ್ಲವ, ಶಿವಾಸ್ ಸ್ಟೈಲೋ ಡಿಝಯ್ನರ್ಸ್ ಕಾರ್ಯಾಧ್ಯಕ್ಷ ಶಿವರಾಮ ಎಸ್. ಭಂಡಾರಿ, ಥಾಣೆಯ ಹೋಟೆಲ್ ಧೀರಜ್ ನ ಮಾಲಿಕ ಕೆ. ಪಿ. ಶೇಖರ ಎಲ್. ಶೆಟ್ಟಿ, ಚಂದ್ರಕಾಂತ ಶಿಂಧೆ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ದಕ್ಷಿಣಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾದ ಮಹಾರಾಷ್ಟ್ರ ಕನ್ನಡ ಪತ್ರಕರ್ತರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ ದಂಪತಿಗಳನ್ನು ಗೌರವಿಸಲಾಯಿತು.

ಮಹಾರಾಷ್ಟ್ರ ಕನ್ನಡ ಪತ್ರಕರ್ತರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ ಸ್ವಾಗತಿಸಿದರು. ರಿಲಾಯನ್ಸ್ ಸುದ್ದಿ ವಿಭಾಗದ ಮುಖ್ಯಸ್ಥ ದಯಾಸಾಗರ ಚೌಟ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯದರ್ಶಿ ಹರೀಶ್ ಕೆ. ಹೆಜ್ಮಾಡಿ ನಿರೂಪಿಸಿದರು.

ಕುಂದಾಪ್ರ ಡಾಟ್ ಕಾಂ- editor@kundapra.com

Exit mobile version