Site icon Kundapra.com ಕುಂದಾಪ್ರ ಡಾಟ್ ಕಾಂ

ಕಾಮನ್‌ವೆಲ್ತ್ ವೇಯ್ಟ್ ಲಿಫ್ಟಿಂಗ್: ಕುಂದಾಪುರ ಗುರುರಾಜ್ ಪೂಜಾರಿಗೆ ಚಿನ್ನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಲೇಷ್ಯಾದಲ್ಲಿ ನಡೆದ ಜೇನ್-ಅಓ ಸಿನಿಯರ್ ಕಾಮನ್‌ವೆಲ್ತ್ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ತಾಲೂಕಿನ ವಂಡ್ಸೆ ಸಮೀಪದ ಜಡ್ಡುವಿನ ಗುರುರಾಜ್ ಪೂಜಾರಿ ಪ್ರಥಮ ಸ್ಥಾನ ಗಳಿಸುವ ಮೂಲಕ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ.
ಕಾಮನ್‌ವೆಲ್ತ್ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಗುರುರಾಜ್ 108ಕೆ.ಜಿ ಸ್ನಾಚ್ ಹಾಗೂ 141ಕೆ.ಜಿ ಜರ್ಕ್ ಸೇರಿ ಒಟ್ಟು 249ಕೆ.ಜಿ ಭಾರವನ್ನು ಎತ್ತುವ ಮೂಲಕ ಪದಕದ ಗುರಿ ತಲುಪಿದ್ದಾರೆ. ಗುರುರಾಜ್ ಪೂಜಾರಿ ಅವರಿಗೆ ‘ಕುಂದಾಪ್ರ ಡಾಟ್ ಕಾಂ‘ನ ಅಭಿನಂದನೆಗಳು

ಇದನ್ನೂ ಓದಿ
► ಕ್ರೀಡಾಕ್ಷೇತ್ರದ ಹೊಸ ಭರವಸೆ ಗುರುರಾಜ್ ಪೂಜಾರಿ – http://kundapraa.com/?p=18402

Exit mobile version