Kundapra.com ಕುಂದಾಪ್ರ ಡಾಟ್ ಕಾಂ

ಸಂವಿಧಾನದ ಮೂರು ಅಂಗ ಕೆಲಸ ಮಾಡಿದಾಗ ಅಭಿವೃದ್ಧಿ ಸಾಧ್ಯ: ಸಂತೋಷ ಹೆಗ್ಡೆ

ಕುಂದಾಪುರ: ಸಂವಿಧಾನ ವ್ಯವಸ್ಥೆಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಶಾಸಕಾಂಗ, ಕಾರ್ಯಾಂಗಗಳು ಮಾಡಬೇಕಾಗುತ್ತದೆ. ಆದರೆ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಮ್ಮ ವೃತ್ತಿನಿಷ್ಠೆಯನ್ನು ಮರೆತಂತಿದೆ. ಸಂವಿಧಾನದ ಮೂರು ಅಂಗಗಳು ಸರಿಯಾಗಿ ಕೆಲಸ ಮಾಡಿದಾಗ ದೇಶದ ಅಭಿವೃದ್ಧಿ ಸಾಧ್ಯ ಎಂದು ನಿವೃತ್ತ ಲೋಕಾಯುಕ್ತ ಹಾಗೂ ನ್ಯಾಯಾಧೀಶರಾದ ಸಂತೋಷ ಹೆಗ್ಡೆ ಹೇಳಿದರು.

ಅವರು ಅಮಾಸೆಬೈಲು ಸರ್ಕಾರಿ ಪ್ರೌಢ ಶಾಲಾ ಅವರಣದಲ್ಲಿ ಜರುಗಿದ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

2010ರಲ್ಲಿ ಬಿಪಿಎಲ್ ಕಾರ್ಡುದಾರರು ಗಣನೀಯವಾಗಿ ಜಾಸ್ತಿಯಾದುದರ ಬಗ್ಗೆ ಸರಕಾರಕ್ಕೆ ವರದಿ ನೀಡಿದ್ದೆ. ಅಕ್ರಮ ಮರಳುಗಾರಿಕೆಯ ಬಗ್ಗೆ ವರದಿಯನ್ನು ನೀಡಿದ್ದೆ. ಗಣಿಗಾರಿಕೆಯ ಕುರಿತು ನೀಡಿದ ವರದಿಯನ್ನೂ ಕೂಡ ಜಾರಿಗೆ ತಂದಿಲ್ಲ. ಒಬ್ಬ ಸುಪ್ರಿಮ್ ಕೋರ್ಟ್ ನ ನಿವೃತ್ತ ನ್ಯಾಯಾಧೀಯ ನೀಡಿದ ವರದಿಯನ್ನು ಪೊಲೀಸ್ ಅಧಿಕಾರಿಗಳು ಪರಿಶೀಲಿಸುವ ಮಟ್ಟಕ್ಕೆ ನಮ್ಮ ವ್ಯವಸ್ಥೆ ಬಂದು ನಿಂತಿದೆ. ಸರಕಾರ ಒಂದೋ ವರದಿಯನ್ನು ಪುರಸ್ಕರಿಸಿ ಇಲ್ಲವೇ ತಿರಸ್ಕರಿಸಿ. ಹಾಗೇ ಇಟ್ಟುಕೊಳ್ಳುವಲ್ಲಿ ಅರ್ಥವಿಲ್ಲ ಎಂದು ಅವರು ಖಾರವಾಗಿ ನುಡಿದರು. _MG_1092

Exit mobile version