Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಕನ್ನಡ ಭಾಷೆಯ ಬಗೆಗೆ ನಿಜವಾದ ಅಭಿಮಾನ ಕಾಳಜಿ ಪ್ರತಿಯೊಬ್ಬ ಕನ್ನಡಿಗನಲ್ಲೂ ಮೂಡಿಬರಬೇಕು. ನಮ್ಮ ಎಲ್ಲಾ ಸಂಭ್ರಮಾಚರಣೆಯ ಜೊತೆಯಲ್ಲಿ ದೇಶ ಕಾಯುವ ಸೈನಿಕರನ್ನು ಸ್ಮರಿಸಿಕೊಳ್ಳಬೇಕು. ಎ೦ದು ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ನಾರಾಯಣ ಶೆಟ್ಟಿ ಅಭಿಪ್ರಾಯ ಪಟ್ಟರು.

ಅವರು ಕರ್ನಾಟಕ ಕರಾವಳಿ ನಾಗರಿಕ ಹಿತರಕ್ಷಣಾ ವೇದಿಕೆಯ ಗಂಗೊಳ್ಳಿ ಘಟಕ ಮತ್ತು ಬೆಂಗಳೂರು ಹೋಟೆಲ್ ನ್ಯೂಸ್ ಪತ್ರಿಕೆಯು ಇಲ್ಲಿ ಹಮ್ಮಿಕೊ೦ಡಿದ್ದ ಕನ್ನಡ ರಾಜ್ಯೋತ್ಸವ ಕಾರ‍್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು.

ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ನರೇಂದ್ರ ಎಸ್ ಗ೦ಗೊಳ್ಳಿ ಮಾತನಾಡಿ ಮಾತೃಬಾಷೆ ಮೂಲಕ ಕಲಿತ ವಿದ್ಯೆ ನೇರವಾಗಿ ಹೃದಯದೊಳಕ್ಕೆ ಇಳಿಯುತ್ತದೆ. ಕನ್ನಡ ಮಧ್ಯಮದ ಮಕ್ಕಳು ತಮ್ಮೊಳಗೆ ಯಾವ ಕೀಳರಿಮೆಯನ್ನು ಇಟ್ಟುಕೊಳ್ಳಬಾರದು. ಸಾಧನೆಯೆ ಮುಖ್ಯವಾಗಬೇಕು ಎಂದರು.

ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷರಾದ ಜಿ.ಕೆ. ವೆಂಕಟೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುರೇಶ.ಜಿ. ಕಾರ‍್ಯಕ್ರಮ ನಿರ್ವಹಿಸಿದರು.ಈ ಸಂದರ್ಭದಲ್ಲಿ ಗಣೇಶ, ಆನ೦ದ, ನಾಗರಾಜ, ರಾಮಚಂದ್ರ, ನಾರಾಯಣ, ಮುಕು೦ದ, ಕಾಶೀನಾಥ ಮೊದಲಾದವರು ಉಪಸ್ಥಿತರಿದ್ದರು.ಸ.ವಿ.ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನಾಡಗೀತೆಯನ್ನು ಹಾಡಿದರು. ಕಾರ‍್ಯಕ್ರಮದ ಬಳಿಕ ಸಿಹಿತಿಂಡಿ ವಿತರಿಸಲಾಯಿತು.

Exit mobile version