Kundapra.com ಕುಂದಾಪ್ರ ಡಾಟ್ ಕಾಂ

ಪವರ್ ಲಿಫ್ಟರ್ ವಿಶ್ವನಾಥ ಗಾಣಿಗರಿಗೆ ಸಹಾಯ ಹಸ್ತ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಡಿಸೆಂಬರ್ ೪ರಿಂದ ೧೦ರ ವರೆಗೆ ನ್ಯೂಜಿಲ್ಯಾಂಡ್‌ನ ಕ್ರೈಸ್ಟ್ ಚರ್ಚ್‌ನಲ್ಲಿ ನಡೆಯಲಿರುವ ಏಷ್ಯಾ ಒಷ್ಯಾನಿಯಾ ಪವರ್ ಲಿಪ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಕುಂದಾಪುರ ತಾಲೂಕಿನ ಬಾಳಿಕೆರೆಯ ವಿಶ್ವನಾಥ ಗಾಣಿಗ ಅವರಿಗೆ ಜೇಸಿಐ ಕುಂದಾಪುರ ಹಾಗೂ ರೋಟರ‍್ಯಾಕ್ಟ್ ವೆಲ್‌ಫೇರ್ ಟ್ರಸ್ಟ್ (ರಿ) ಕುಂದಾಪುರ ಆರ್ಥಿಕ ಸಹಾಯ ಹಸ್ತ ನೀಡಿದೆ.

ಈ ಸಂದರ್ಭದಲ್ಲಿ ಜೇಸಿಐ ಕುಂದಾಪುರದ ನಿಯೋಜಿತ ಅಧ್ಯಕ್ಷ ಶ್ರೀಧರ ಸುವರ್ಣ, ರೋಟರ‍್ಯಾಕ್ಟ್ ವೆಲ್‌ಫೇರ್ ಟ್ರಸ್ಟ್‌ನ ಬಿ. ಕಿಶೋರ್ ಕುಮಾರ್ ಕುಂದಾಪುರ, ಪ್ರವೀಣ್‌ಕುಮಾರ್ ಟಿ, ದಾಮೋದರ ಪೈ, ಜೇಸಿಐ ಕುಂದಾಪುರದ ಪೂರ್ವಾಧ್ಯಕ್ಷ ರಾಘವೇಂದ್ರಚರಣ ನಾವಡ, ನಾಗೇಶ ನಾವಡ, ಮಿಥುನ್ ಸುವರ್ಣ, ಚರಣ್ ಸುವರ್ಣ, ಸಂತೋಷ ಕೋಟೇಶ್ವರ ಉಪಸ್ಥಿತರಿದ್ದರು. ಜೇಸಿಐ ಕುಂದಾಪುರ ಹಾಗೂ ರೋಟರ‍್ಯಾಕ್ಟ್ ವೆಲ್‌ಫೇರ್ ಟ್ರಸ್ಟ್ (ರಿ) ಕುಂದಾಪುರ ನೀಡಿದ ಸಹಕಾರಕ್ಕೆ ಕ್ರೀಡಾ ಪಟು ವಿಶ್ವನಾಥ ಗಾಣಿಗ ಕೃತಜ್ಞತೆ ಸಲ್ಲಿಸಿದ್ದಾರೆ.

Exit mobile version