Kundapra.com ಕುಂದಾಪ್ರ ಡಾಟ್ ಕಾಂ

ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಮಾರಣಕಟ್ಟೆ ಕೃಷ್ಣಮೂರ್ತಿಮಂಜರಿಗೆ ಸಾರ್ವಜನಿಕ ಅಭಿನಂದನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಜಿಲ್ಲಾಡಳಿತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಮಾರಣಕಟ್ಟೆ ಕೃಷ್ಣಮೂರ್ತಿಮಂಜರಿಗೆ ಡಿ ಪ್ರಶಸ್ತಿಯ ಮೌಲ್ಯ, ಘನತೆಯನ್ನು ಹೆಚ್ಚಿಸುವ ಕೆಲಸ ಮಾಡಿದೆ. ಸಾಮಾನ್ಯವಾಗಿ ನಮ್ಮ ವ್ಯವಸ್ಥೆಗಳಲ್ಲಿ ಪ್ರಶಸ್ತಿಯನ್ನು ಪಡೆಯಲು ಅರ್ಜಿ ಹಾಕಬೇಕಾಗಿದೆ. ಆದರೆ ಮಂಜರು ಅರ್ಜಿ ಸಲ್ಲಿಸದಿದ್ದರೂ ಅವರ ಪರವಾಗಿ ಚಿತ್ತೂರಿನ ಸ್ಥಳಿಯರೇ ಅರ್ಜಿ ಸಲ್ಲಿಸಿದ್ದನ್ನು ಜಿಲ್ಲಾಡಳಿತ ಗುರುತಿಸಿ ಗೌರವಿಸಿರುವುದು ಹೆಮ್ಮೆಯ ಸಂಗತಿ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ ನುಡಿದರು.

ಅವರು ಚಿತ್ತೂರಿನ ಬ್ರಹ್ಮಾಧ್ಯ ಕಲ್ಯಾಣ ಮಂಟಪದ ವಿಪ್ಲವ ಓಪನ್ ಗಾರ್ಡನ್‌ನಲ್ಲಿ ನಡೆದ ’ಸಾರ್ವಜಕ ಅಭಿನಂದನಾ ಸಮಾರಂಭದಲ್ಲಿ ಕೊಡುಗೈ ದಾ ಕೃಷ್ಣಮೂರ್ತಿ ಮಂಜರವರನ್ನು ಸನ್ಮಾಸಿ ಮಾತನಾಡುತ್ತಿದ್ದರು.

ಮಂಜರು ಎಲ್ಲಾ ಕ್ಷೇತ್ರಗಳಿಗೂ ಪ್ರತಿಫಲಾಪೇಕ್ಷೆ ಇಲ್ಲದೆ ತನ್ನ ದುಡಿಮೆಯ ಒಂದು ಭಾಗವನ್ನು ಕಷ್ಟದಲ್ಲಿದ್ದವರಿಗೆ ದಾನ ಮಾಡುತ್ತಾ ಬಂದು ಆರ್ಥಿಕವಾಗಿ ಬಲಾಡ್ಯರಿಗೆ ಮಾದರಿಯಾಗಿದ್ದಾರೆ. ಮಂಜರ ಸೇವೆ ಹಾಗೂ ಕೊಡುಗೆ ಗಮಸಿದರೆ ಅವರಿಗೆ ರಾಜ್ಯ ಪ್ರಶಸ್ತಿ ಬರಬೇಕಾಗಿದೆ ಆದರೆ ಜಿಲ್ಲಾ ಪ್ರಶಸ್ತಿ ಬಂದಿದೆ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಬಸ್ರೂರು ಅಪ್ಪಣ್ಣ ಹೆಗ್ಡೆ ಮಾತನಾಡಿ ಉಳ್ಳವರು ಅಶಕ್ತರ ಸೇವೆಯನ್ನು ಮಾಡುವ ಕೆಲಸ ಮಾಡಬೇಕು. ಅಂತವರ ಸಂಖ್ಯ ಹೆಚ್ಚಿದಾಗ ಅಶಕ್ತರ ಬಾಳಿಗೆ, ಬಡ ವಿದ್ಯಾರ್ಥಿಗಳಿಗೆ, ಅನಾರೋಗ್ಯ ಪೀಡಿತರಿಗೆ ಒಂದಷ್ಟು ನೆರವು ಸಿಗಲಿದೆ. ಉದ್ಯಮಿ ಕೃಷ್ಣಮೂರ್ತಿ ಮಂಜರಲ್ಲಿ ಪ್ರತಿಫಲಪೇಕ್ಷೆ ಇಲ್ಲದೆ ಜನಸಾಮಾನ್ಯರಿಗೆ ಸ್ಪಂಧಿಸುವ ಅಪರೂಪದ ಗುಣವಿದೆ. ಅನೇಕ ಧಾರ್ಮಿಕ ಕ್ಷೇತ್ರಗಳಿಗೆ, ವಿದ್ಯಾರ್ಥಿಗಳಿಗೆ, ಅನಾರೋಗ್ಯ ಪೀಡಿತರಿಗೆ ಹಾಗೂ ಸಂಘಸಂಸ್ಥೆಗಳ ಚಟುವಟಿಕೆಗಳಿಗೆ ಅವರು ಡಿರುವ ಕೊಡುಗೆಯನ್ನು ಗಮಸಿ ಅರ್ಹ ವ್ಯಕ್ತಿಯನ್ನು ಜಿಲ್ಲಾಡಳಿತ ಗುರುತಿಸಿ ಪುರಸ್ಕರಿಸಿದೆ ಎಂದು ನುಡಿದರು.

ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಮುಖಂಡ ಬಿ.ಎಂ.ಸುಕುಮಾರ ಶೆಟ್ಟಿ, ಹೋಟೆಲ್ ಉದ್ಯಮಿ ನೇರಂಬಳ್ಳಿ ರಾಘವೇಂದ್ರ ರಾವ್, ಜಿಲ್ಲಾ ಪಂಚಾಯತ್ ಸದಸ್ಯ ಬಾಬು ಶೆಟ್ಟಿ, ಸ್ಥಳಿಯ ಮುಖಂಡ ಡಾ.ಅತುಲ್ ಕುಮಾರ್ ಶೆಟ್ಟಿ ತಾಲೂಕು ಪಂಚಾಯತ್ ಸದಸ್ಯ ಉದಯ ಜಿ.ಪೂಜಾರಿ, ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅನುವಂಶೀಯ ಮೊಕ್ತೇಸರ ಸದಾಶಿವ ಶೆಟ್ಟಿ, ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅರ್ಚಕ ಚಂದ್ರಶೇಖರ ಮಂಜ, ವಿಶಾಲಾಕ್ಷಿ ಸುಬ್ರಹ್ಮಣ್ಯ ಮಂಜ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರದೀಪ್‌ಚಂದ್ರ ಶೆಟ್ಟಿ, ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ ಮಡಿವಾಳ, ಭಾಗವಹಿಸಿದ್ದರ

ಹಲವಾರು ದೇವಾಲಯಗಳ ಆಡಳಿತ ಮಂಡಳಿ ಸದಸ್ಯರು, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜಕರು ಈ ಸಂದರ್ಭ ರಾಜ್ಯೋತ್ಸವ ಪುರಸ್ಕೃತ ಕೃಷ್ಣಮೂರ್ತಿ ಮಂಜರನ್ನು ಅಭಿನಂದಿಸಿದರು.

ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದ್ದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿ ವಂಡಬಳ್ಳಿ ಜಯರಾಮ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ರವಿರಾಜ್ ಶೆಟ್ಟಿ ಚಿತ್ತೂರು ಕೆಳಾಮನೆ ವಂದಿಸಿದ್ದು ಪತ್ರಕರ್ತ ಚಿ್ತೂರು ಪ್ರಭಾಕರ ಆವಾರ್ಯ ಕಾರ್ಯಕ್ರಮ ರೂಪಿಸಿದರು.

Exit mobile version