Kundapra.com ಕುಂದಾಪ್ರ ಡಾಟ್ ಕಾಂ

ಗಾನಕೋಗಿಲೆ ರಾಘವೇಂದ್ರ ಆಚಾರ್ಯ ಅವರಿಗೆ ಸಮ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಸಹಾಯಕರ ಹಾಗೂ ಅಶಕ್ತರ ನೆರವಿಗಾಗಿ ಬಡಗಿನ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ಮಳೆಗಾಲದ ಕೊನೆಯ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದ ಸಮಾರಂಭ ತ್ರಾಸಿ ಆಣ್ಣಪ್ಪಯ್ಯ ಸಭಾಭವನದಲ್ಲಿ ಜರಗಿತು.

ಬಿಜೆಪಿ ಮುಖಂಡ ಸುಕುಮಾರ್ ಶೆಟ್ಟಿ ಅಧ್ಯಕ್ಚತೆ ವಹಿಸಿ ಮಾತನಾಡಿ ಅಸಹಾಯಕರ ಹಾಗೂ ಅಶಕ್ತರ ನೆರವಾಗುವ ನಿಟ್ಟಿನಲ್ಲಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ತ್ರಾಸಿ ರವಿಶೆಟ್ಟಿಗಾರ್ ಬಳಗದವರ ಸಮಾಜ ಸೇವೆಯನ್ನು ಅಭಿನಂದಿಸಿದರು.

ತಾ.ಪಂ. ಸದಸ್ಯ ರಾಜು ದೇವಾಡಿಗ ಮಾತನಾಡಿ ತಮ್ಮ ತಮ್ಮ ಪ್ರದೇಶಗಳಲ್ಲಿ ಸಕ್ರಿಯಾರಾಗಿರುವ ಸಂಘಟನೆಗಳಿಂದ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿಂದ ಬಡ ಜನರಿಗೆ ನೆರವಾಗುವ ಮೂಲಕ ದೇಶದ ಪ್ರಗತಿಗೆ ಕಾರಣೀಭೂತರಾಗುತ್ತಿದ್ದಾರೆ ಎಂದು ಸಂಘದ ಕಾರ‍್ಯವನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಹೇರೂರು ಯಕ್ಷಗಾನ ಮೇಳದ ಭಾಗವತ ಗಾನಕೋಗಿಲೆ ಎಂದು ಪ್ರಸಿದ್ಧಿ ಪಡೆದಿರುವ ರಾಘವೇಂದ್ರ ಆಚಾರ್ಯ ಅವರನ್ನು ಗೌರವಿಸಿ ಸಮ್ಮಾನಿಸಲಾಯಿತು.

ತ್ರಾಸಿ ಗ್ರಾಮ ಪಂ. ಸದಸ್ಯ ಸುಧಾಕರ ಆಚಾರ್ಯ, ಹೊಸಾಡು ಗ್ರಾಮ ಪಂ.ಅಧ್ಯಕ್ಷ ಚಂದ್ರ ಪೂಜಾರಿ, ನಾರಾಯಣ ಕೆ., ರವಿಶೆಟ್ಟಿಗಾರ್, ಕೇಶವ ಶೆಟ್ಟಿಗಾರ್ ಉಪಸ್ಥಿತರಿದ್ದರು.

ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸಿ ಸಹಾಯ ಧನವನ್ನು ನೀಡಲಾಯಿತು. ಸುದರ್ಶನ ವಿಜಯ ಹಾಗೂ ಕಾರ್ತವೀರ್ಯ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಿತು. ಕಾರ್ಯಕ್ರಮವನ್ನು ಸಂಜೀವ ಮೂಲ್ಲಿಕಟ್ಟೆ ಸ್ವಾಗತಿಸಿ, ನಿರೂಪಿಸಿದರು.

Exit mobile version