ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ೨ ಎಕ್ರೆ ಜಾಗ ಲಭ್ಯವಿದ್ದು, ಈ ಜಾಗದಲ್ಲಿರುವ ದೊಡ್ಡ ಗಾತ್ರದ ಮರಗಳನ್ನು ಅರಣ್ಯ ಇಲಾಖೆಯವರಿಂದ ಅಭಿಪ್ರಾಯ ಪಡೆದು ನಂತರ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಕುಂದಾಪುರ ತಾಲೂಕು ಪಂಚಾಯತ್ ಪ್ರಗತಿ ಪರಿಶೀಲನಾ ಸಭೆಯ ಅನುಪಾಲನಾ ವರದಿ ಗುರುತಿಸಿದ್ದನ್ನು ನಿವೇಶನ ರಹಿತರಿಗೆ ಭೂಮಿ ಹಕ್ಕು ಪತ್ರ ಮಂಜೂರು ಮಡಲು ಸರಕಾರ ಕ್ರಮವಹಿಸಬೇಕು ಎಂದು ಸಿಐಟಿಯು ಕುಂದಾಪುರ ತಾಲೂಕು ಅಧ್ಯಕ್ಷ ಎಚ್. ನರಸಿಂಹ ಹೇಳಿದರು.
ಅವರು ತಲ್ಲೂರು, ಉಪ್ಪಿನಕುದ್ರು, ಗ್ರಾಮಗಳ ಮನೆ, ನಿವೇಶನ ರಹಿತರ- ಬೃಹತ್ ಸಮಾವೆಶ ಉದ್ಘಾಟಿಸಿ ಮಾತನಾಡಿದರು. ಕೃಷಿ ಕೂಲಿಕಾರರ ಸಂಘದ ಕುಂದಾಪುರ ತಾಲೂಕು ಕಾರ್ಯದರ್ಶಿ ವೆಂಕಟೇಶ ಕೋಣಿ ಮಾತನಾಡುತ್ತಾ ತಲ್ಲೂರು ಗ್ರಾಮದಲ್ಲಿ – ಕಂದಾಯ ಇಲಾಖೆ- ಸರಕಾರಿ ಜಾಗ ೬.೦೦ ಎಕ್ರೆ ಅತಿಕ್ರಮಣ ಸ್ಥಳವನ್ನು ಸ್ಥಳೀಯ ಗ್ರಾಮ ಪಂಚಾಯತ್‌ಗೆ ಹಸ್ತಾಂತರ ಮಾಡಲಾಗಿದ್ದು, ಕೂಡಲೇ ಹಕ್ಕು ಪತ್ರ ಮಂಜೂರು ಮಾಡಬೇಕು ಎಂದು ಸರಕಾರವನ್ನು ಒತ್ತಾಯಿಸಿದರು. ತಲ್ಲೂರು ಗ್ರಾಮದ ಸ.ನಂ. ೧೬೮ ವಿಸ್ತೀರ್ಣ ೨.೨೦ ಎಕ್ರೆ, ಸ.ನಂ. ೧೬೧ ವಿಸ್ತೀರ್ಣ ೩.೨೫ ಎಕ್ರೆ, ಸ.ನಂ. ೧೮೪, ೧೭೫, ೧೯೯ ವಿಸ್ತೀರ್ಣ ೧೨ ಎಕ್ರೆ ಸರಕಾರಿ ಸ್ಥಳವನ್ನು ಬಡನಿವೇಶನ ರಹಿತರಿಗೆ ವಿತರಣೆ ಮಾಡಲು ಸರಕಾರವನ್ನು ಒತ್ತಾಯಿಸುವ ಹೋರಾಟ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.
ನಿವೇಶನ ರಹಿತರ ಸಮಾವೇಶದ ಬಳಿಕ ನಿವೇಶನ ರಹಿತ ಅರ್ಜಿದಾರರು – ತಲ್ಲೂರು ಗ್ರಾಮ ಪಂಚಾಯತ್ ಕಛೇರಿ ಎದುರು ಪ್ರತಿಭಟನೆ ನಡೆಸಿ ಪಂಚಾಯತ್ ಅಧ್ಯಕ್ಷರಿಗೆ ಸಾಮೂಹಿಕವಾಗಿ ಮನವಿ ಅರ್ಪಿಸಲಾಗುವುದು. ಸಿಐಟಿಯು ಮುಖಂಡ ಸುರೇಶ ಕಲ್ಲಾಗರ, ಶೀಲಾವತಿ ಉಪಸ್ಥಿತರಿದ್ದರು. ನಾಗರತ್ನ ನಾಡ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.