Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ರೋಟರಿ ವಲಯ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ರೋಟರಿ ಸನ್‌ರೈಸ್ ಚಾಂಪಿಯನ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ರೋಟರಿ ಕ್ಲಬ್‌ನ ಆಶ್ರಯದಲ್ಲಿ ನಡೆದ 2016-17ರ ರೋಟರಿ ವಲಯ 1ರ ಸಾಂಸ್ಕೃತಿಕ ಸ್ಪರ್ಧೆ ಹಿಗ್ಗಿನ ಬುಗ್ಗೆ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ವಿವಿಧ ವಿಭಾಗಗಳಲ್ಲಿ 5 ಪ್ರಥಮ, 5 ದ್ವಿತೀಯ, 2 ತೃತೀಯ ಒಟ್ಟು 12 ಪ್ರಶಸ್ತಿಗಳನ್ನು ಪಡೆದು ಅಗ್ರಮಾನ್ಯ ಸ್ಥಾನದೊಂದಿಗೆ ಚಾಂಪಿಯನ್‌ಶಿಪ್‌ನ್ನು ತನ್ನದಾಗಿಸಿಕೊಂಡಿದೆ.

ವೈಯಕ್ತಿಕ ಗೀತೆ, ಯುಗಳ ಗೀತೆ, ಸಮೂಹ ನೃತ್ಯ, ಚಿತ್ರಕಲೆ, ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ, ಭಾವಗೀತೆ, ಸಮೂಹ ಗಾನ, ವೈಯಕ್ತಿಕ ನೃತ್ಯ, ಪ್ರಹಸನ, ಫ್ಯಾಶನ್ ಶೋಗಳಲ್ಲಿ ದ್ವಿತೀಯ, ಚಿತ್ರಕಲೆಯಲ್ಲಿ ಎರಡು ತೃತೀಯ ಸ್ಥಾನವನ್ನು ಬಾಚಿಕೊಂಡು ರೋಟರಿ ಸನ್‌ರೈಸ್ ಇತಿಹಾಸದಲ್ಲಿ ಪ್ರಥಮ ಬಾರಿಗೆ ವಲಯ ಸಾಂಸ್ಕೃತಿಕ ಸ್ಫರ್ಧೆಯಲ್ಲಿ ಚಾಂಪಿಯನ್ ಪಟ್ಟ ಗಳಿಸಿ ವಲಯದಲ್ಲಿ ತನ್ನ ಹಿರಿಮೆಯನ್ನು ಸ್ಥಾಪಿಸಿದೆ. ರೋಟರಿ ಸನ್‌ರೈಸ್ ಅಧ್ಯಕ್ಷರಾದ ಕೆ. ನರಸಿಂಹ ಹೊಳ್ಳ ಪ್ರಶಸ್ತಿ ಸ್ವೀಕರಿಸಿ ಕ್ಲಬ್‌ನ ಸದಸ್ಯರ ಅವಿರತ ಪರಿಶ್ರಮಕ್ಕೆ ಕೃತಜ್ಞತೆ ಸಲ್ಲಿಸಿದರು.

ಹಿಗ್ಗಿನ ಬುಗ್ಗೆ ಸಮಾರೋಪ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಪಂಚಾಯತ್‌ನ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಬಹುಮಾನ ವಿತರಿಸಿದರು. ರೋಟರಿ ಸಹಾಯಕ ಗವರ್ನರ್ ಮಧುಕರ ಹೆಗ್ಡೆ, ಜೋನಲ್ ಲೆಫ್ಟಿನೆಂಟ್ ಅಬುಶೇಖ್ ಸಾಹೇಬ್, ರೋಟರಿ ಜಿಲ್ಲಾ ಸಾಂಸ್ಕೃತಿಕ ಸಭಾಪತಿ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ, ವಲಯ ಸಾಂಸ್ಕೃತಿಕ ಸಭಾಪತಿ ರವಿಶಂಕರ್, ನಿಯೋಜಿತ ರೋಟರಿ ಸಹಾಯಕ ಗವರ್ನರ್ ಕೆ.ಕೆ. ಕಾಂಚನ್, ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ಸುಧಾಕರ ಪಿ. ವಂದಿಸಿದರು.

Exit mobile version