Site icon Kundapra.com ಕುಂದಾಪ್ರ ಡಾಟ್ ಕಾಂ

ರೋಟರಿ ಸನ್‌ರೈಸ್ : ಇ-ಲರ್ನಿಂಗ್ ಕಿಟ್ ಕೊಡುಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ವತಿಯಿಂದ ಬಸ್ರೂರು ಸರಕಾರಿ ಪ್ರೌಢಶಾಲೆಗೆ ದಾನಿಗಳ ಸಹಕಾರದೊಂದಿಗೆ ಇ-ಲರ್ನಿಂಗ್ ಕಿಟ್‌ನ್ನು ಕೊಡುಗೆಯಾಗಿ ನೀಡಲಾಯಿತು. ರೋಟರಿ ಲಿಟ್ರಸಿ ಮೆಷಿನ್ ಯೋಜನೆಯಡಿ ಇ-ಲರ್ನಿಂಗ್ ಕಿಟ್‌ನ್ನು ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅಧ್ಯಕ್ಷರಾದ ಕೆ. ನರಸಿಂಹ ಹೊಳ್ಳ ಅವರು ಬಸ್ರೂರು ಸರಕಾರಿ ಪ್ರೌಢಶಾಲೆಯ ಮುಖ್ಯೋಪಧ್ಯಾಯಿನಿ ಜ್ಯೋತಿ ಬಿ ಅವರಿಗೆ ಹಸ್ತಾಂತರಿಸಿದರು.

ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಸದಸ್ಯರಾದ ಸೀತಾರಾಮ, ಸಿ.ಹೆಚ್. ಗಣೇಶ, ಅರುಣಚಂದ್ರ ಕೊತ್ವಾಲ್, ಸದಾನಂದ ಉಡುಪ, ಶಾಲಾ ಶಿಕ್ಷಕರಾದ ಅರ್ಪಣಾ ಬಾ, ಪಿಯುಸ್ ಡಿ’ಸೋಜಾ, ಬೀರಣ್ಣ ಗಾಂವ್‌ಕರ್, ಸುರೇಶ್ ಭಟ್, ಶೇಖರ ಪೂಜಾರಿ, ಪ್ರಕಾಶ್, ಜಯಲಕ್ಷ್ಮೀ  ನಾಯಕ್, ಸವಿತಾ ಕೆ, ಕುಸುಮಾ, ಪುಷ್ಪ ಮಡಿವಾಳ ಇನ್ನಿತರರು ಉಪಸ್ಥಿತರಿದ್ದರು. ಶಿಕ್ಷಕ ಪ್ರಶಾಂತ ವಂದಿಸಿದರು.

Exit mobile version