ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಇಲ್ಲಿನ ಚಿತ್ತೂರು ಗ್ರಾ.ಪಂ ವ್ಯಾಪ್ತಿಯ ವಂಡ್ಸೆ ನಂದ್ರೊಳ್ಳಿ ರಸ್ತೆ ಬಳಿಯ ನ್ಯಾಗಲ ಮನೆ ಕಿಂಡಿ ಅಣೆಕಟ್ಟಿಗೆ ಹಾಕಲಾದ ಫೈಬರ್ ಹಲಗೆಯ ಬದಿ ಒಡೆದು ನೀರು ಹರಿದು ಹೋಗುತ್ತಿದ್ದು, ಕೃಷಿಕಾರ್ಯಕ್ಕಾಗಿ ನಿಲ್ಲಿಸಲಾಗಿದ್ದ ನೀರು ಪೋಲಾಗುತ್ತಿದೆ.
ಕಳೆದ ವರ್ಷ ಈ ಕಾಮಾಗಾರಿಯನ್ನು ಆರಂಭಿಸಲಾಗಿತ್ತು. ಈಗ ಈ ಕಿಂಡಿ ಅಣೆಕಟ್ಟಿನ ಕಾಮಗಾರಿ ಪೂರ್ಣಗೊಂಡಿದ್ದು, ಕಳೆದ ಮಂಗಳವಾರದಂದು ಈ ಅಣೆಕಟ್ಟಿನ ಕಿಂಡಿಗೆ ಪೈಬರ್‌ನ ಹಲಗೆಗಳನ್ನು ಅಳವಡಿಸಲಾಗಿತ್ತು. ಆದರೆ ಫೈಬರ್ ಹಲಗೆ ಹಾಕಿದ ಮೂರೇ ದಿನದಲ್ಲಿ ಫೈಬರ್‌ನ ಒಂದು ಭಾಗ ಒಡೆದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಮಗಾರಿಗೆ ಐದು ವರ್ಷಗಳ ಕಾಲ ನಿರ್ವಹಣೆ ಹೊಣೆಯಿದ್ದು, ಐದು ವರ್ಷಗಳ ಕಾಲ ಏನೆ ಸಮಸ್ಯೆ ಬಂದರೂ ಅದರ ನಿರ್ವಹಣೆ ನಮ್ಮದಾಗಿರುತ್ತದೆ. ಈಗ ಅಳವಡಿಸಲಾದ ಫೈಬರ್ ಹಲಗೆ ಪ್ರಾಯೋಗಿಕವಾಗಿ ಅಳವಡಿಸಲಾಗಿದ್ದು, ಇದರ ಸಾಮರ್ಧ್ಯವನ್ನು ಅರಿಯುವ ಉದ್ದೇಶವನ್ನು ಹೊಂದಿ ಅಳವಡಿಸಲಾಗಿದೆ. ಇದು ಯಶಸ್ವಿಯಾಗದ ಹಿನ್ನೆಲೆ ಇದಕ್ಕೆ ಬೇರೆ ಸದೃಡ ಹಲಗೆಯನ್ನು ಅಳವಡಿಸುತ್ತೇವೆ. – ಕಾಮಗಾರಿ ನಡೆಸಿದ ಗುತ್ತಿಗೆದಾರ