Site icon Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪುಂದ: ಲಯನ್ಸ್ ನೇತ್ರ ತಪಾಸಣಾ ಶಿಬಿರ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಲಯನ್ಸ್ ಮತ್ತು ಲಯನೆಸ್ ಕ್ಲಬ್ ಬೈಂದೂರು ಉಪ್ಪುಂದ ನೇತೃತ್ವದಲ್ಲಿ ಪ್ರಸಾದ್ ನೇತ್ರಾಲಯ ಉಡುಪಿ ಇವರ ಸಹಯೋಗದೊಂದಿಗೆ ಉಪ್ಪುಂದದ ಮಾತೃಶ್ರಿ ಸಭಾಭವನದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಜರುಗಿತು.

ಲಯನ್ಸ್ ಜಿಲ್ಲಾ ಗವೆರ್ನೆರ್ ಕಾರ್ಯಕ್ರಮಗಳ ಸಂಯೋಜಕ ಲಯನ್ ವಿ.ಜಿ ಶೆಟ್ಟಿ ಶಿಬಿರ ಉದ್ಘಾಟಿಸಿ ಶುಭ ಹಾರೈಸಿದರು. ಪ್ರಸಾದ್ ನೆತ್ರಾಲಯದ ನೇತ್ರ ತಜ್ಞ ಡಾ ಅಕ್ಷಯ್, ನಾಗರಾಜ್ ಗಾಣಿಗ, ಶರತ್ ಕುಮಾರ್ ಶೆಟ್ಟಿ, ಮೊಹಮ್ಮದ್ ಹನಿಫ಼್, ದಿನಕರ ಶೆಟ್ಟಿ ಮುಖ್ಯ ಉಪಸ್ಥಿತರಿದ್ದರು.

ಬೈಂದೂರು ಉಪ್ಪುಂದ ಲಯನ್ಸ್ ಅಧ್ಯಕ್ಷ ಡಾ. ವೆಂಕಟೇಶ ಉಪ್ಪುಂದ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಲಯನ್ ಕಾರ್ಯದರ್ಶಿ ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಲಯನ್ ದಿವಾಕರ್ ಶೆಟ್ಟಿ ವಂದಿಸಿದರು ಮುನ್ನೂರು ಮಂದಿ ಶಿಬಿರದ ಸದುಪಯೊಗ ಪಡೆದುಕೊಂಡರು

Exit mobile version