ಕುಂದಾಪ್ರ ಡಾಟ್ ಕಾಂ ಸುದ್ದಿ
ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಆಳ್ವಾಸ್ ಚಿತ್ರಿಸಿರಿ ರಾಜ್ಯ ಮಟ್ಟದ ಕಲಾಶಿಬಿರದ ಸಮಾರೋಪ ಸಮಾರಂಭದಲ್ಲಿ ಹಿರಿಯ ಚಿತ್ರಕಲಾವಿದ ಜಿ.ಎಲ್.ಎನ್. ಸಿಂಹ ಅವರಿಗೆ ಆಳ್ವಾಸ್ ಚಿತ್ರಸಿರಿ-2016 ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ವನ್ಯಜೀವಿ ಛಾಯಾಚಿತ್ರಕಾರ ಟಿ.ಎನ್.ಎ. ಪೆರುಮಾಳ್ ಅವರಿಗೆ ಆಳ್ವಾಸ್ ಛಾಯಾಚಿತ್ರ ಸಿರಿ-2016 ಪ್ರಶಸ್ತಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಮೋಹನ ಆಳ್ವ ಅವರು ಪ್ರದಾನ ಮಾಡಿದರು.
ಆಳ್ವಾಸ್‌ನಲ್ಲಿ ನಡೆದಿರುವ ಚಿತ್ರಕಲಾ ಶಿಬಿರಗಳಲ್ಲಿ ರೂಪುಗೊಂಡಿರುವ ಕಲಾಕೃತಿಗಳೂ ಸೇರಿದಂತೆ ಆಳ್ವಾಸ್‌ನಲ್ಲಿ ಆರ್ಟ್ ಗ್ಯಾಲರಿಯೊಂದು ಸ್ಥಾಪನೆಯಾಗಲಿ; ಅದು ಪ್ರವಾಸಿ ತಾಣವೂ ಆಗಿರುವ ಮೂಡಬಿದಿರೆಗೊಂದು ಕೊಡುಗೆಯಾಗು ವುದು ಖಂಡಿತ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಡಾ| ಎಂ. ಮೋಹನ ಆಳ್ವ ಅವರು ಮಾತನಾಡಿ, ಕಲೆಯೂ ಸೇರಿದಂತೆ ಹಲವಾರು ಚಟುವಟಿಕೆಗಳಿಂದ ಸಜೀವವಾಗಿರುವ ಶೈಕ್ಷಣಿಕ ಆವರಣದಲ್ಲಿ ಓಡಾಡುವ ಆಳ್ವಾಸ್ ವಿದ್ಯಾರ್ಥಿಗಳು ಈ ಎಲ್ಲ ಚಟುವಟಿಕೆಗಳ ಸಂಸರ್ಗದಿಂದ, ಪ್ರಭಾವದಿಂದ ತಮ್ಮ ವ್ಯಕ್ತಿತ್ವವನ್ನು ಅರಳಿಸಿಕೊಳ್ಳುವ ಸಾಧ್ಯತೆ ಉಜ್ವಲವಾಗಿದೆ’ ಎಂದರು.ಜಿ.ಎಲ್.ಎನ್. ಸಿಂಹ ಅವರ ಕುರಿತು ಮೈಸೂರು ರಾಮ್‌ಸನ್ಸ್ ಕಲಾ ಪ್ರತಿಷ್ಠಾನದ ಕಾರ್ಯದರ್ಶಿ ಆರ್.ಜಿ. ಸಿಂಘ… ಸಚಿತ್ರ ವಿವರಣೆ ನೀಡಿದರು.
ಟಿ.ಎನ್.ಎ. ಪೆರುಮಾಳ್ ಅವರ ಕುರಿತು ಅಸ್ಟ್ರೋಮೋಹನ್ ಆವರು ಪರಿಚಯ ನೀಡಿ ಅಭಿನಂದಿ ಸಿದರು. ನಾಲ್ಕು ವಿಭಾಗಗಳಲ್ಲಿ ನಡೆದ ರಾಷ್ಟ್ರ ಮಟ್ಟದಆಳ್ವಾಸ್ ಛಾಯಾಚಿತ್ರಸಿರಿ ಫೋಟೋ ಸ್ಪರ್ಧೆ ಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ರಾಜ್ಯಮಟ್ಟದ ಆಳ್ವಾಸ್ ಚಿತ್ರಸಿರಿ ಶಿಬಿರದಲ್ಲಿ ಭಾಗವಹಿಸಿದ ಕಲಾವಿದರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಆಳ್ವಾಸ್ ಚಿತ್ರಸಿರಿ ಕಲಾ ಶಿಬಿರ ಸಲಹಾ ಸಮಿತಿಯ ಕೋಟಿ ಪ್ರಸಾದ್ ಆಳ್ವ, ಗಣೇಶ್ ಸೋಮಯಾಜಿ, ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು. ಕಲಾವಿದರಾದ ಬಾಗೂರು ಮಾರ್ಕಾಂಡೇಯ, ಡಾ| ಸುನಿತಾ ಪಾಟೀಲ್ ಅನಿಸಿಕೆ ವ್ಯಕ್ತಪಡಿಸಿದರು. ಡಾ| ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.