Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಎಕ್ಷ್‌ಪ್ರೆಸ್ ರೈಲು ನಿಲುಗಡೆಗೆ ಆಗ್ರಹ. ಸಂಸದೆಗೆ ಮನವಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೂಡಲಕಟ್ಟೆ ರೈಲ್ವೆ ನಿಲ್ದಾಣದಲ್ಲಿ ಎಕ್ಷ್‌ಪ್ರೆಸ್ ರೈಲು ನಿಲುಗಡೆಗೆ ಆಗ್ರಹಿಸಿ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಿದರು.

ಮೂಡಲಕಟ್ಟೆ ರೈಲ್ವೆ ನಿಲ್ದಾಣದ ಮೂಲಕ ಕೊಚ್ಚುವೇಲಿ, ಬಿಕಾನೇರ್ ಎಕ್ಷ್‌ಪ್ರೆಸ್ ಬೆಳಗ್ಗೆ ೬.೪೫ಕ್ಕೆ ತೆರಳುತ್ತಿದ್ದು ಬೈಂದೂರು, ಮುರುಡೇಶ್ವರ ಕುಮುಟಾ, ಗೋವಾ, ಮುಂಬೈ, ಗುಜರಾತ್, ರಾಜಸ್ತಾನ ಪ್ರವಾಸಿ ತಾಣಗಳಿಗೆ ಹೋಗಲು ಅನುಕೂಲವಾಗುವ ಜೊತೆ ಗೋವಾಕ್ಕೆ ತೆರಳೀ, ಅದೇ ದಿನ ಹಿಂದಕ್ಕೆ ಮರುಳಲು ಅವಕಾಶ ಇರುವುದರಿಂದೆ ಈ ರೈಲುಗಳು ನಿಲುಗಡೆಯಾದರೆ ಉತ್ತಮ ಎಂದು ಸಮಿತಿ ಮನವಿಯಲ್ಲಿ ತಿಳಿಸಿದೆ. ಸಂಸದೆ ಶೋಭಾ ಕರಂದ್ಲಾಜ್ ರೈಲು ನಿಲುಗಡೆ ಬಗ್ಗೆ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಕುಂದಾಪುರ ರಾಜಸ್ತಾನ ಸಮುದಾಯ ಮುಖಂಡ ಮಘುರಾಮ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಆಟ್ಕೆರೆ ಬಾಬು ಪೈ, ರೈಲು ಹೋರಾಟ ಸಮಿತಿ ಹಂಗಾಮಿ ಕಾರ‍್ಯದರ್ಶಿ ಜೋಯ್ ಜೆ.ಕಾರ‍್ವಾಲೋ, ಗಣೇಶ್ ಪುತ್ರನ್, ವಿವೇಕ್ ನಾಯಕ್, ಉದಯ ಭಂಡಾರ್‌ಕಾರ್, ಪದ್ಮನಾಭ ಶೆಣೈ, ವಿವೇಕ್ ಶೆಣೈ ಇದ್ದರು.

Exit mobile version