Kundapra.com ಕುಂದಾಪ್ರ ಡಾಟ್ ಕಾಂ

ಬ್ಯಾಂಕ್ ಮುಂದೆ ಸರತಿ ಸಾಲು. ನೆರವಾಗುತ್ತಿರುವ ಕಂಬದಕೋಣೆ, ಗಂಗೊಳ್ಳಿ ಯುವಕರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ/ಬೈಂದೂರು: ಹಳೆ ನೋಟುಗಳನ್ನು ಒಪ್ಪಿಸಿ ಹೊಸ ನೋಟು ಪಡೆಯಲು ಹಾಗೂ ಖಾತೆಗೆ ಹಣ ಜಮೆ ಮಾಡಲು ಕಳೆದ ಕೆಲವು ದಿನಗಳಿಂದ ಜನರು ದಿನವಿಡಿ ಬ್ಯಾಂಕುಗಳ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಬ್ಯಾಂಕುಗಳ ಹೊರಕ್ಕೆ ಬಿಸಿಲಿನಲ್ಲಿ ನಿಲ್ಲುವವರು ಹಾಗೂ ನೋಟು ಬದಲಾವಣೆಯ ಅರ್ಜಿಗಳನ್ನು ತುಂಬಲು ತಿಳಿಯದವರಿಗಾಗಿ ಕುಂದಾಪುರ ತಾಲೂಕಿನ ಕೆಲವೆಡೆ ಯುವಕರ ತಂಡ ಬ್ಯಾಂಕಿನ ಗ್ರಾಹಕರ ನೆರವಿಗೆ ಬಂದಿದೆ.

ಬೈಂದೂರು ಸಮೀಪದ ಕಂಬದಕೋಣೆ ವಿಜಯ ಬ್ಯಾಂಕಿನ ಎದುರು ದಿನವೂ ಸರತಿ ಸಾಲು ನಿರ್ಮಾಣವಾಗಿರುವುದನ್ನು ಮನಗಂಡ ಪರಿಸರದ ಯುವಕರು ಬಿಸಿಲಿನಲ್ಲಿ ನಿಲ್ಲುವವರಿಗಾಗಿ ಬ್ಯಾಂಕಿನ ಎದುರು ಶ್ಯಾಮಿಯಾನ ವ್ಯವಸ್ಥೆ ಮಾಡಿಕೊಟ್ಟಿದೆ. ಬೈಂದೂರು ಕ್ಷೇತ್ರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶರತ್‌ಕುಮಾರ್ ಶೆಟ್ಟಿ ಹಾಗೂ ಬೈಂದೂರು ಬಿಜೆಪಿ ಯುವಮೋರ್ಚಾ ಕಂಬದಕೋಣೆ ಸ್ಥಾನೀಯ ಸಮಿತಿ ಅಧ್ಯಕ್ಷ ಅಧ್ಯಕ್ಷ ರಾಘವೇಂದ್ರ ದೇವಾಡಿಗ ಮತ್ತವರ ತಂಡ ಶ್ಯಾಮಿಯಾನ ಹಾಕಿಸಿ ನೆರಳಾಗಿದ್ದಾರೆ.

ಗಂಗೊಳ್ಳಿಯ ಬ್ಯಾಂಕುಗಳನ್ನು ಜನರ ಸರತಿ ಸಾಲು ಕಂಡ ವೀರ ಸಾವರ್ಕರ ದೇಶಪ್ರೇಮಿ ಬಳಗ ಸಂಘಟನೆಯ ಯುವಕರು ಹಳೆ ನೋಟುಗಳನ್ನು ಬದಲಾವಣೆ ಹಾಗೂ ಖಾತೆಗೆ ಹಣ ಜಮೆ ಮಾಡುವವವರಿಗೆ ಅಗತ್ಯ ಮಾಹಿತಿ ಒದಗಿಸುತ್ತಾ, ಹಣ ಬದಲಾವಣೆಗೆ ಬರುವವರಿಗೆ ಅರ್ಜಿಗಳನ್ನು ತುಂಬಿಸಿ ಕೊಡಲಾಗುತ್ತಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಒಟ್ಟಿನಲ್ಲಿ ಕಪ್ಪುಹಣ ನಿಯಂತ್ರಿಸಿಲು ದೇಶದಲ್ಲಿ ಜಾರಿಗೆ ತಂದ ಒಂದು ಕ್ರಾಂತಿಕಾರಕ ಯೋಜನೆಯಿಂದಾಗಿ ಜನರು ಬ್ಯಾಂಕು, ಎಟಿಎಂಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿದ್ದರೂ, ದೇಶಕ್ಕಾಗಿ ಸಹಿಸಿಕೊಳ್ಳುತ್ತೇವೆ ಎಂದು ಜನರೇ ಹೇಳುತ್ತಿದ್ದಾರೆ. ಇದರ ನಡುವೆ ಅಲ್ಲಲ್ಲಿ ಯುವಕರ ತಂಡ ಒಂದಿಲ್ಲೊಂದು ಮಾರ್ಗದಲ್ಲಿ ಬ್ಯಾಂಕುಗಳ ಮುಂದೆ ನಿಲ್ಲುವವರಿಗೆ ನೆರವಾಗುವ ಮೂಲಕ ತಮ್ಮ ಅಳಿಲು ಸೇವೆ ಸಲ್ಲಿಸುತ್ತಿರುವುದು  ಮಾತ್ರ ಶ್ಲಾಘನೀಯ. © ಕುಂದಾಪ್ರ ಡಾಟ್ ಕಾಂ.

Gangolli, Kambadakone youth helping people who standing in queue  in fornt of bank for changing the 500 1000 currency

Exit mobile version