ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಕುಂದಾಪುರ ತಾಲೂಕಿನ ಕಂಚುಗೋಡು ನಿವಾಸಿ ಚಂದ್ರ ಖಾರ್ವಿ ಅವರ ಮಗ ಭರತ್ ಖಾರ್ವಿ ಅವರ ವೈದ್ಯಕೀಯ ಚಿಕಿತ್ಸೆಗೆ ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದಿಂದ ೨೦ ಸಾವಿರ ರೂ.ಗಳನ್ನು ನೀಡಲಾಯಿತು.
ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಎಚ್.ಮಂಜು ಬಿಲ್ಲವ ಅವರು ಭರತ್ ಖಾರ್ವಿ ಅವರ ಮನೆಗೆ ತೆರಳಿ ಸಹಾಯಧನದ ಚೆಕ್‌ನ್ನು ಹಸ್ತಾಂತರಿಸಿದರು. ಸಂಘದ ಉಪಾಧ್ಯಕ್ಷ ಮೋಹನ ಖಾರ್ವಿ ಎಪಿ., ಮಾಜಿ ಅಧ್ಯಕ್ಷ ಡಿ.ಚಂದ್ರ ಖಾರ್ವಿ, ಮಡಿ ಶಂಕರ ಖಾರ್ವಿ,
ಬಿ.ಸುರೇಶ ಬಂಗೇರ ಕೋಡಿ, ನಾಗಪ್ಪಯ್ಯ ಪಟೇಲ್ ಹಾಗೂ ನಾಡದೋಣಿ ಮೀನುಗಾರರ ಸಂಘದ ಸದಸ್ಯರು ಉಪಸ್ಥಿತರಿದ್ದರು .

