Kundapra.com ಕುಂದಾಪ್ರ ಡಾಟ್ ಕಾಂ

ನಮ್ಮತನವನ್ನುಉಳಿಸಿಕೊಳ್ಳುವ ಕಾಯಕ ಅಗತ್ಯ ನಡೆಯಬೇಕಿದೆ: ಬಿ. ಜಯಶ್ರೀ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಇಂದು ಇತರ ಭಾಷೆಗಳನ್ನು ಕಲಿಯುವ, ಪ್ರೀತಿಸುವ ಹಂಬಲದಲ್ಲಿ `ನಮ್ಮತನ’ವನ್ನು ಕಡೆಗಣಿಸುತ್ತಿದ್ದೇವೆ. ಆದರೆ ನಮ್ಮ ಸಂಸ್ಕೃತಿಯನ್ನು ಪ್ರೀತಿಸಿ ಬೆಳೆಸುವ ಕಾಯಕ ಅಗತ್ಯವಾಗಿ ನಡೆಯಬೇಕಿದೆ. ಇಂತಹ ಸಂದರ್ಭಗಳಲ್ಲಿ ಆಳ್ವಾಸ್ ನುಡಿಸಿರಿಯಂತಹ ಸಮ್ಮೇಳನಗಳು
ತುಂಬಾ ಮುಖ್ಯವೆನಿಸುತ್ತದೆ ಎಂದು ಕನ್ನಡದ ಹಿರಿಯ ರಂಗಭೂಮಿ ಕಲಾವಿದೆ ಬಿ. ಜಯಶ್ರೀ ಅಭಿಪ್ರಾಯಪಟ್ಟರು.

ರತ್ನಾಕರವರ್ಣಿ ವೇದಿಕೆಯಲ್ಲಿ ಆಳ್ವಾಸ್ ನುಡಿಸಿರಿ- ಕನ್ನಡ ನಾಡು, ನುಡಿ, ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನದ ಮುನ್ನಾದಿನ ಆಯೋಜಿಸಲಾಗಿದ್ದ ಆಳ್ವಾಸ್ `ವಿದ್ಯಾರ್ಥಿ ಸಿರಿ’-ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ಇಲ್ಲಿನ ಉದ್ಘಾಟಿಸಿ ಅವರು ಮಾತನಾಡಿದರು.

ಆಳ್ವಾಸ್ ನುಡಿಸಿರಿಯ ಮೂಲಕ ಕನ್ನಡ ಸಂಸ್ಕೃತಿ ಲೋಕಕ್ಕೆ ಗಣನೀಯ ಸೇವೆ ಸಲ್ಲಿಸುತ್ತಿರುವ ಡಾ. ಎಂ. ಮೋಹನ್ ಆಳ್ವರ ಕಾರ್ಯ ನಿಜಕ್ಕೂ ಶ್ಲಾಘನೀಯವಾದುದು. ತನ್ನ ವೈಶಿಷ್ಟ್ಯತೆಯಿಂದಾಗಿ ಕನ್ನಡದ ಇತರೆ ಹಬ್ಬಗಳಿಗಿಂತ ಆಳ್ವಾಸ್ ನುಡಿಸಿರಿ ವಿಭಿನ್ನವಾಗಿ ನಿಲ್ಲುತ್ತದೆ ಎಂದರು.

`ಆಳ್ವಾಸ್ ಸಿನಿಸಿರಿ’-ಮಿನಿ ಚಲನಚಿತ್ರೋತ್ಸವವನ್ನು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಉದ್ಘಾಟಿಸಿದರು. ಆಳ್ವಾಸ್ ವಿದ್ಯಾರ್ಥಿಸಿರಿ ೨೦೧೬ರ ಅಧ್ಯಕ್ಷೆ ವಿ ಎಸ್.ಡಿ.ಎಂ. ಪ್ರೌಢಶಾಲೆಯ ವಿದ್ಯಾರ್ಥಿನಿ ಅನನ್ಯಾ ಅಧ್ಯಕ್ಷತೆ ವಹಿಸಿದ್ದರು. ಡಾ. ಎಂ. ಮೋಹನ ಆಳ್ವ ಉಪಸ್ಥಿತರಿದ್ದರು.

Exit mobile version