Site icon Kundapra.com ಕುಂದಾಪ್ರ ಡಾಟ್ ಕಾಂ

ವಿಮೋಚನಾ ಜನಜಾತ್ರೆಗೆ ಕುಂದಾಪುರದಲ್ಲಿ ಚಾಲನೆ

ಕುಂದಾಪುರ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಮಿತಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ 124ನೇ ಜನ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿರುವ ಸಾಮಾಜಿಕ ಪರಿವರ್ತನೆ ವಿಮೋಚನಾ ಜನಜಾತ್ರೆಗೆ ಬೆಳಗ್ಗೆ ಕುಂದಾಪುರದಲ್ಲಿ ಚಾಲನೆ ನೀಡಲಾಯಿತು.

ಕುಂದಾಪುರ ಡಿವೆಎಸ್ಪಿ ಮಂಜುನಾಥ ಶೆಟ್ಟಿ ಹಸಿರು ನಿಶಾನೆ ತೋರುವ ಮೂಲಕ ಜನಜಾತ್ರೆಗೆ ಚಾಲನೆ ನೀಡಿ ಶುಭ ಹಾರೆಸಿದರು. ಪತ್ರಕರ್ತ ಕೆ.ಸಿ. ರಾಜೇಶ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ ರಾಯಪ್ಪನ ಮಠ, ದಸಂಸ ಕೋಲಾರ ಜಿಲ್ಲೆಯ ಮುಖಂಡ ಕಷ್ಣಪ್ಪ, ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ) ರಾಜ್ಯ ಸಂಘಟನಾ ಸಂಚಾಲಕ ಉದಯ ಕುಮಾರ್ ತಲ್ಲೂರು, ದಲಿತ ಮುಖಂಡ ರಾದ ಚಂದ್ರ ಅಲ್ತಾರ್, ವಿಜಯ ಕೆ.ಎಸ್., ಕ.ನಾ.ಚಂದ್ರ, ನಾಗರಾಜ ಕೆಂಚನೂರು, ಕಷ್ಣ ಅಲ್ತಾರ್ ಮೊದಲಾದವರು ಉಪಸ್ಥಿತರಿದ್ದರು.

ವಿಮೋಚನಾ ಜನಜಾತ್ರೆ ಬೆಂದೂರು, ಕೊಲ್ಲೂರು, ಸಿದ್ಧಾಪುರ, ಹೆಬ್ರಿ, ಪೆರ್ಡೂರು, ಕಾರ್ಕಳ, ಉಡುಪಿ ಮಾರ್ಗವಾಗಿ ರಥಯಾತ್ರೆ ಉಡುಪಿ ತಲುಪಲಿದೆ. ಏ.14ರಂದು ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ಹಾಗೂ ನಂತರ ಬ್ರಹ್ಮಾವರ ತಲುಪಲಿದೆ.

Exit mobile version