ಮೂಡುಬಿದಿರೆ: ನಾಡು ನುಡಿ ಸಂಸ್ಸೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ೨೦೧೬ ಉದ್ಘಾಟನೆಗೆ ಪೂರ್ವಭಾವಿಯಾಗಿ ರಾಜ್ಯದ ವಿವಿಧೆಡೆಗಳಿಂದ ಭಾಗವಹಿಸಿದ್ದ ಕಲಾತಂಡಗಳು ಪ್ರೇಕ್ಷಕರ ಗಮನ ಸೆಳೆದವು.
ಕಲಾತಂಡ ಮೆರಗು:
ನುಡಿಸಿರಿಯಲ್ಲಿ 50ಕ್ಕೂ ಅಧಿಕ ಕಲಾತಂಡಗಳು ಭಾಗವಹಿಸಿದ್ದರು. ಆಳ್ವಾಸ್ ಮುಖ್ಯದ್ವಾರದಿಂದ ರತ್ನಾಕರವರ್ಣಿ ವೇದಿಕೆಯ ತನಕ ನಡೆದ ಮೆರವಣಿಗೆಯಲ್ಲಿ ನೂರಾರು ಕಲಾವಿದರು ಭಾಗವಹಿಸಿದ್ದರು.
ರಂಜಿತ್ ಕಾರ್ಕಳ ಅವರ ಪೂತನಿ, ಮಂಡ್ಯ ಜಾನಪದ ಕಲಾತಂಡದ ನಂದಿ ಧ್ವಜ, ಪಕ್ಕಿನಿಶಾನೆ, 13 ಮಂದಿ ಕಲಾವಿದರು, ಕೊಂಬು, ಚೆಂಡೆ, ಆಟಿಕಳೆಂಜ, ಕೊರಗರ ಗಜಾಮೇಳ, ಮಂಗಳೂರು ಡೋಲು, ಚಾಮರಾಜನಗರ ತಂಡದ ಗೊರವರಕುಣಿತ, , ಸೋಮನ ಕುಣಿತ, ಪೂಜಾಕುಣಿತ, ಚಿತ್ರದುರ್ಗ ಜಾನಪದ ತಂಡದ ಮರಗಾಲು, ವೀರಭದ್ರನಕುಣಿತ, ಚಿತ್ರದುರ್ಗ ಬ್ಯಾಂಡ್ ಸೆಟ್ ಹೊನ್ನಾವರ ಜಾನಪದತಂಡದ ಹಾಲಕ್ಕಿ, ಹಾವೇರಿ ಜಿಲ್ಲೆಯ, ಬೆಂಡರಕುಣಿತ ರಮೇಶ್ಕಲ್ಲಡ್ಕ ಅವರ ಡ್ರಾಗನ್, ಕೇರಳದ ದೇವರ ವೇಷ, ಕುಂದಾಪುರ ಜಾನಪದ ಕಲಾತಂಡ ಡೋಲು, ಬಿಜಾಪುರ ಲಂಬಾಣಿತಂಡದ ಲಂಬಾಣಿ, ಬೆದ್ರ ಪ್ರೆಂಡ್ಸ್ ಹುಲಿವೇಷ, ವಿಜಯ್ ಮತ್ತು ತಂಡ, ಉಡುಪಿಯ ಕರಗ ಕೋಲಾಟ, ಬಳ್ಳಾರಿ ತಂಡದ ಸುಡುಗಾಡು ಸಿದ್ಧರು, ಮಂದಾರ್ತಿಯ ಗುಮ್ಟೆ ಕುಣಿತ, ಅಶ್ವರಾಮ ತಂಡ, ಬಳ್ಳಾರಿಯ ಹಗಲು ವೇಷ, ಮೈಸೂರಿನ ನಗಾರಿ, ನಗಾರಿ, ಮಹಿಳಾ ತಂಡ, ಹಾವೇರಿಜಾನಪದ ಕಲಾ ತಂಡ ಪುರವಂತಿಕೆ, ಕೇರಳದ ತೆಯ್ಯಮ್, ಧಾರವಾಡಜಾನಪದಕಲಾತಂಡದ ಜಗ್ಗಳಿಕೆ ಮೇಳ, ದಪ್ಪು, ಮೂಕಾಂಬಿಕಾ ಚೆಂಡೆ ಬಳಗ, ಮಂಗಳೂರಿನ ಕೊಂಚಾಡಿಚೆಂಡೆ, ರಾಜಸ್ಥಾನದ ಕೊಂಚಾಡಿಚೆಂಡೆ, ಮೂಡಬಿದರೆಯ ಮಹಿಳಾ ಚೆಂಡೆ, ಕಾರ್ಕಳದ ಕೋಳಿಗಳು, ಜೇಮ್ಸ್ ಹೊನ್ನಾವರದ ಹೊನ್ನಾವರ ಬ್ಯಾಂಡ್, ರಾಜೀವ್ ಮತ್ತುತಂಡ, ಬೆಳ್ತಂಗಡಿಯ ಸೃಷ್ಟಿ ಗೊಂಬೆ ಬಳಗ, ದಫ್ಮುಟ್ಟ್, ಕೇರಳದ ಹುಲಿವೇಷ, ಪಂಚವಾದ್ಯ , ಬುದಿಯಪ್ಪ ಮತ್ತುತಂಡ, ಶಿವಮೊಗ್ಗದ ದೊಳ್ಳು ಕುಣಿತ, ತುಳುನಾಡ ವಾದ್ಯ, ರೈತರು, ಬೆಳಗಾವಿ ಪೇಟ ಧರಿಸಿದ ಗಣ್ಯರು, ಸ್ಯಾಕ್ಸೋಫೋನ್ ಆಳ್ವಾಸ್ ಕಲಾವಿದರಿಂದ ತಟ್ಟಿರಾಯ 32, ಕೊಡೆಗಳು, ಯಕ್ಷಗಾನ (ಬಡಗು, ತೆಂಕು), ತ್ರಿವರ್ಣಧ್ವಜ, ಶ್ರೀಲಂಕಾ ಕಲಾವಿದರು, ಶ್ರೀಲಂಕಾದ ದೊಡ್ಡ ಮುಖವಾಡ, ಡೊಳ್ಳು ಕುಣಿತ , ಚೆಂಡೆ, ಲಂಗ ದಾವಣಿ, ಪಲ್ಲಕ್ಕಿ, ತೇರು, ಕುಸ್ತಿ ದೇಹದಾಡ್ಯ, ಪೂರ್ಣಕುಂಭ ಇದ್ದವು.