Kundapra.com ಕುಂದಾಪ್ರ ಡಾಟ್ ಕಾಂ

ಗಾನಕುಸುಮ: ಸೀನಿಯರ್ ವಿಭಾಗದಲ್ಲಿ ವಿಜಯಲಕ್ಷ್ಮಿ, ಜೂನಿಯರ್ ವಿಭಾಗದಲ್ಲಿ ಅನೀಶ್ ವಿಜೇತ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಲಾಮನಸ್ಸುಗಳನ್ನು ಒಗ್ಗೂಡಿಸಿಕೊಂಡು ಕುಸುಮಾ ಫೌಂಡೇಶನ್ ನಾಗೂರು ಆಯೋಜಿಸುತ್ತಿರುವ ಕುಸುಮಾಂಜಲಿ- ೨೦೧೬ ಕಾರ್ಯಕ್ರಮದ ಪೂರ್ವಭಾವಿಯಾಗಿ ಹಮ್ಮಿಕೊಂಡ ಹಮ್ಮಿಕೊಂಡ ಗಾನಕುಸುಮ ಸಂಗೀತ ಕಾರ್ಯಕ್ರಮದ ಅಂತಿಮ ಸುತ್ತಿನ ಸೀನಿಯರ್ ವಿಭಾಗದಲ್ಲಿ ಬಿ.ಬಿ ಹೆಗ್ಡೆ ಕಾಲೇಜು ಕುಂದಾಪುರದ ವಿಜಯಲಕ್ಷ್ಮಿ, ಬಿ.ಬಿ ವಿಜೇತರಾಗಿದ್ದರೇ, ಜೂನಿಯರ್ ವಿಭಾಗದಲ್ಲಿ ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್‌ನ ಬಿ.ಅನೀಶ್ ವಿಜೇತರಾಗಿದ್ದಾರೆ.

ನಾಗೂರಿನ ಶ್ರೀ ಕೃಷ್ಣ ಲಲಿತ ಕಲಾ ಮಂದಿರದಲ್ಲಿ ನಡೆಯಿತು. ಸೆಮಿಫೈನಲ್ ಸುತ್ತಿನಲ್ಲಿ ಜೂನಿಯರ್ ಹಾಗೂ ಸೀನಿಯರ್ ವಿಭಾಗದಿಂದ ೧೫ ಗಾಯಕರನ್ನು ಫೈನಲ್ ಸ್ಪರ್ಧೆಗೆ ಆಯ್ಕೆಯಾದರೇ, ಫೈನಲ್‌ನಲ್ಲಿ ಇಬ್ಬರು ಆಯ್ಕೆಯಾದರು.

ಸ್ಪರ್ಧೆಯ ತಿರ್ಪುಗಾರರಾಗಿ ಪ್ರಸಿದ್ಧ ಸಂಗೀತ ಬಾಲಚಂದ್ರ, ಉಡುಪಿ, ಗಾಯಕ ರಾಘವೇಂದ್ರ ಐತಾಳ ಬ್ರಹ್ಮಾವರ, ಗಾಯಕ ಪಲ್ಲವಿ ತುಂಗಾ ಕಾರ್ಯನಿರ್ವಹಿಸಿದರು. ಕುಸುಮಾಂಜಲಿ ೨೦೧೬ ರ ಚಾನೆಲ್ ಪಾರ್ಟ್ನರ್ ಮುಂಬಯಿ ಶುಭಸಾಗರ್ ಹೋಟೆಲ್ ಮಾಲಿಕರು ಲಕ್ಷ್ಮಣ ಪೂಜಾರಿ ದೀಪ
ಬೆಳಗಿಸುದರ ಮೂಲಕ ಕಾರ್ಯಕ್ರಮವನ್ನು ಉಧ್ಘಾಟಿಸಿದರು.

ಕುಸುಮ ಹೋಮ್ಸ್ ಪ್ರೈವೆಟ್ ಲಿಮಿಟೆಡ್‌ನ ನಿರ್ದೇಶಕ ಕುಸುಮಾವತಿ ಎಸ್. ಶೆಟ್ಟಿ, ನಿವೃತ್ತ ಶಿಕ್ಷಕಿ ಸುಧಾಮೂರ್ತಿ, ಪಿ. ಸುಧಾಕರ ಶೆಟ್ಟಿ ಹಾಗೂ ಯು. ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು. ಕುಸುಮ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ ನಳಿನ ಕುಮಾರ ಶೆಟ್ಟಿ ಇವರು ಸ್ವಾಗತಿಸಿ, ಗಾನಕುಸುಮ ಕಾರ್ಯಕ್ರಮವು ಕೇವಲ ಸ್ಪರ್ಧೆಯಾಗಿರದೇ, ಇದೊಂದು ಪ್ರತಿಭಾ ಪ್ರದರ್ಶನದ ವೇದಿಕೆಯಾಗಿದ್ದು, ಫೈನಲ್‌ಗೆ ಆಯ್ಕೆಯಾದ ಸ್ಪರ್ಧಿಗಳಿಗೆ, ಡಿಸೆಂಬರ್ ೧೧ ರಂದು ನಡೆಯುವ ಕುಸುಮಾಂಜಲಿ-೨೦೧೬ ರಲ್ಲಿ ಹಾಡಲು ಅವಕಾಶ ಕಲ್ಪಿಸುದರ ಮೂಲಕ ಯುವ ಉದಯೋನ್ಮುಖ ಪ್ರತಿಭೆಗಳನ್ನು ಹೊರ ಜಗತ್ತಿಗೆ ಪರಿಚಯಿಸುವ ಮಹತ್ವಾಕಂಕ್ಷೆಯನ್ನು ಹೊಂದಿದ್ದು, ಮುಂದಿನ ವರ್ಷದಿಂದ ಗಾನಕುಸುಮ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟಕ್ಕೆ ವಿಸ್ತರಿಸುವ ಯೋಜನೆ ನಮ್ಮ ಸಂಸ್ಥೆಗಿದೆ ಎಂದು ತಿಳಿಸಿದ್ದಾರೆ. ನಿರ್ದೇಶಕಿ ವಿದ್ಯಾ ಇವರು ಸ್ಪರ್ಧೆಯ ಕಿರುಮಾಹಿತಿಯನ್ನು ನೀಡಿದರು. ವೀಗನ್ ಶಂಕರನಾರಾಯಣ ಅವರು ವಂದಿಸಿದರು. ಕುಸುಮ ಸಂಸ್ಥೆಯ ಸದಸ್ಯೆ ರೇಷ್ಮಾ ಅವರು ಕಾರ್ಯಕ್ರಮ ನಿರೂಪಿಸಿದರು.

 

Exit mobile version