Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್ ಧಾನ್ಯಸಿರಿ: ಕಣ್ಮರೆಯಾಗುತ್ತಿರುವ ಧಾನ್ಯಗಳಿಗೆ ಸ್ಥಾನ

ರಮ್ಯಾ. ಜಿ | ಕುಂದಾಪ್ರ ಡಾಟ್ ಕಾಂ ವರದಿ
ಮೂಡುಬಿದರೆ: ನಶಿಸಿ ಹೊಗುತ್ತಿರುವ ದೇಶೀಯ ತಳಿಯ ಧಾನ್ಯಗಳನ್ನು ಶೇಖರಿಸಿ ಅವುಗಳ ಮಹತ್ವವನ್ನು ಸಾರುವ ಕಾಯಕಕ್ಕೆ ಧಾನ್ಯಸಿರಿ ಸಾಕ್ಷಿಯಾಯಿತು.

ದಾವಣಗೆರೆ ಕುಂಬಳೂರಿನ ಶರಣಯ್ಯ ಮುದ್ದಣ್ಣ ಸಾವಯವ ಕೃಷಿಕರ ಬಳಗ ಎಂಬ ಸಂಸ್ಥೆಯು ಅಳಿವಿನಂಚಿನಲ್ಲಿರುವ ಧಾನ್ಯಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದು, ೪೦೦ಕ್ಕೂ ಅಧಿಕ ಬಗೆಯ ದೇಶಿಯ ತಳಿಗಳನ್ನು ಸಂಗ್ರಹಿಸುತ್ತಿದೆ. ಅವುಗಳನ್ನು ಈ ಭಾರಿ ಧಾನ್ಯಸಿರಿಯಲ್ಲಿ ಪ್ರದರ್ಶಿಸುತ್ತಿದೆ.

೪೦ ಬಗೆಯ ಸಿರಿಧಾನ್ಯದ ತಳಿಗಳು, ೨೦ ಬಗೆಯ ತರಕಾರಿ ಬೀಜಗಳು, ತೋಡಭತ್ತ, ಅವಲಕ್ಕಿ, ಆರಕ, ಸಾಮೆ, ಗಡ್ಡೆ-ಗೆಣಸು, ಬಾಳೆ, ತೆಂಗುಗಳ ೪೦ ತಳಿಗಳಿವೆ. ಕಣ್ಮರೆಗೊಳ್ಳುತ್ತಿರುವ ತಳಿಗಳಾದ ಸಹಸ್ರ ಕದಳಿ ಬಾಳೆ ಹಣ್ಣು, ಸಲರಿ, ನಾಟಿ ಜೋಳ, ಕಪ್ಪು ಅರಶಿನ, ಚಂದ್ರ ಬಾಳೆ, ಕಾಡು ಟೋಮೇಟೊ, ಬೆಣ್ಣೆ ಹಣ್ಣು, ರೆಕ್ಕೆ ಅವರೆ, ನಾಗಲಿಂಗ, ಕೇತಕಿ ಫಲ,ಉಳಿ ಶೀರ ಇತರ ಬಗೆಯ ಧಾನ್ಯಗಳು, ಔಷಧಿಯ ಗಿಡಗಳು ಇಲ್ಲಿವೆ.

ಧಾನ್ಯಸಿರಿಯಲ್ಲಿ ಕಲ್ಲಂಗಡಿಯಲ್ಲಿ ರಚಿಸಿದ ಸ್ವಾತಂತ್ರ ಹೋರಾಟಗಾರರ ಕಲಾಕೃತಿಗಳು ಮನಸೆಳೆಯುತ್ತಿದ್ದರೇ, ತರಕಾರಿ ಹಾಗೂ ಪುಷ್ಪಗಳಲ್ಲಿ ಮಾಡಿ ಪಕ್ಷಿಗಳ ಕಲಾಕೃತಿ ಮೆರುಗು ನೀಡಿದೆ.

Exit mobile version