Kundapra.com ಕುಂದಾಪ್ರ ಡಾಟ್ ಕಾಂ

ಎ.20: ವಾರಾಹಿ ಕಾಲುವೆ ಉದ್ಘಾಟನೆಗೆ ಸಿ.ಎಂ.

ಉಡುಪಿ: 35 ವರ್ಷಗಳ ಹಿಂದೆ ಆರಂಭವಾಗಿ ತನ್ನ ಮಂದಗತಿಯಿಂದ ಇತ್ತೀಚಿಗೆ ಭಾರಿ ರಾಜಕೀಯ ಸುದ್ದಿಗೆ ಗ್ರಾಸವಾಗಿದ್ದ ವಾರಾಹಿ ಯೋಜನೆಯಡಿ ಕಾಲುವೆಗೆ ನೀರು ಹರಿಸಲು ಏ.20ರಂದು ಮುಹೂರ್ತ ಫಿಕ್ಸ್ ಆಗಿದೆ. ಅಂದು ಬೆಳಗ್ಗೆ 10ಗಂಟೆಗೆ ಸಿಎಂ ಸಿದ್ಧರಾಮಯ್ಯ ಅವರು ಸಿದ್ಧಾಪುರದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಅವರು ಸೋಮವಾರ ಬ್ರಹ್ಮಗಿರಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ವಾರಾಹಿ ಯೋಜನೆಯಡಿ ಕಳೆದ 2 ವರ್ಷದಲ್ಲಿ ಶೇ.60ರಷ್ಟು ಕಾಮಗಾರಿಗಳು ಮುಗಿದ್ದಿದ್ದು, ಇನ್ನುಳಿದ ಕಾಲುವೆ ಕಾಮಗಾರಿಗೆ ಅಗತ್ಯವಿರುವ ಭೂಸ್ವಾಧೀನ (ಅರಣ್ಯ ಇಲಾಖೆಯ ಕ್ಲಿಯರೆನ್ಸ್ ಸೇರಿ ) ಪ್ರಕ್ರಿಯೆ ಈ ಮಾಸಾಂತ್ಯದಲ್ಲಿ ಪೂರ್ಣಗೊಳ್ಳಲಿದೆ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ನೀರಾವರಿ ಸಚಿವ ಎಂ.ಬಿ.ಪಾಟೀಲ್, ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್, ಅರಣ್ಯ ಸಚಿವ ರಮಾನಾಥ ರೈ, ರಾಜ್ಯ ಸಭೆ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ವಿ.ಪ.ಸದಸ್ಯರುಗಳಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾ.ಗಣೇಶ್ ಕಾರ್ಣಿಕ್ ಹಾಗೂ ಸ್ಥಳೀಯ ಶಾಸಕ, ಜನಪ್ರತಿನಿಗಳು ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಮೀನುಗಾರ ಮಹಿಳೆಯರಿಗೆ ಶೂನ್ಯ ಬಡ್ಡಿ ಸಾಲ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಅಭಿನಂದನಾ ಕಾರ್ಯಕ್ರಮ ಶಂಕರನಾರಾಯಣದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಪ್ರಮೋದ್ ಮಧ್ವರಾಜ್, ಗೋಪಾಲ ಪೂಜಾರಿ, ಜನಾರ್ಧನ ತೋನ್ಸೆ, ಎಂ.ಎ.ಗಫೂರ್, ಭುಜಂಗ ಶೆಟ್ಟಿ, ಶಿವರಾಮ ಶೆಟ್ಟಿ , ದಿವಾಕರ ಕುಂದರ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ಪ್ರಕಾಶ್ ಕೊಡವೂರು, ಹರೀಶ್ ಕಿಣಿ, ಬಿ.ನರಸಿಂಹ ಮೂರ್ತಿ, ಅಬ್ದುಲ್ ಅಜೀಜ್, ದೇವಕಿ ಸಣ್ಣಯ್ಯ ಕುಂದಾಪುರ ಉಪಸ್ಥಿತರಿದ್ದರು.

Exit mobile version