Kundapra.com ಕುಂದಾಪ್ರ ಡಾಟ್ ಕಾಂ

ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ೨೦೧೬ಕ್ಕೆ ತೆರೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ವಿದ್ಯಾಗಿರಿಯ ಆಳ್ವಾಸ್ ಕಾಲೇಜಿನ ಆವರಣದಲ್ಲಿ ಮೂರು ದಿನಗಳ ಕಾಲ ಜರುಗಿದ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ರತ್ನಾಕರವರ್ಣಿ ವೇದಿಕೆಯಲ್ಲಿ ಜರುಗಿತು.

ಆಳ್ವಾಸ್ ನುಡಿಸಿರಿಯ ಕಾರ್ಯಾಧ್ಯಕ್ಷ ಡಾ. ಎಂ. ಮೋಹನ ಆಳ್ವ ಪ್ರಾಸ್ತಾವಿಕ ಮಾತುಗಳನ್ನಾಡಿ ಪ್ರತಿವರ್ಷವೂ ಜನರಿಂದ ಬರುತ್ತಿರುವ ಸಕಾರಾತ್ಮಕ ಸ್ವಂದನೆಯಿಂದಾಗಿ ನುಡಿಸಿರಿ ವರ್ಷದಿಂದ ವರ್ಷಕ್ಕೆ ಕಳೆಗಟ್ಟುತ್ತಿದೆ. ಎಲ್ಲರನ್ನೂ ಎಲ್ಲವನ್ನೂ ಒಳಗೊಂಡಂತೆ ನುಡಿಸಿರಿಯನ್ನು ಸಾಂಸ್ಕೃತಿಕ ಹಬ್ಬವಾಗಿ ಮೂಡಿಬಂದಿದ್ದು ನಮ್ಮಲ್ಲೊಂದು ಸಾರ್ಥಕ ಭಾವವಿದೆ ಎಂದರು.

ಡಾ. ಗಿರಡ್ಡಿ ಗೋವಿಂದರಾಜ್, ಸುಬ್ರಾಯ ಚೊಕ್ಕಾಡಿ, ಡಆ ಚೆನ್ನಣ್ಣ ವಾಲೀಕಾರ್, ಡಾ. ಕೆ.ಆರ್. ಸಂಧ್ಯಾ ರೆಡ್ಡಿ, ಜಿ.ಎನ್. ರಂಗನಾಥ ರಾವ್, ಕೆ.ವಿ. ಅಕ್ಷರ, ಹರಿಣಿ, ಶ್ರೀನಿವಾಸ ಜಿ ಕಪ್ಪಣ್ಣ, ಶೀನಪ್ಪ ರೈ ಸಂಪಾಜೆ, ಜಬ್ಬಾರ್ ಸಮೊ, ಎಚ್.ಆರ್. ಲೀಲಾವತಿ, ಡಾ. ಚಂದ್ರಶೇಖರ ಚೌಟ, ಡಾ. ಈ. ಜ್ಞಾನಾನಂದ ಅ ಫಲಪುಷ್ಪ, ಪ್ರಶಸ್ತಿಪತ್ರ ಹಾಗೂ ಇಪ್ಪತ್ತೈದುಸಾವಿರ ನಗದು ನೀಡಿ ಪುರಸ್ಕರಿಸಲಾಯಿತು.

ಸಮ್ಮೇಳನಾಧ್ಯಕ್ಷೆ ಡಾ. ಬಿ.ಎನ್. ಸುಮಿತ್ರಾಬಾಯಿ ಅಧ್ಯಕ್ಷತೆ ವಹಿಸಿದ್ದರು. ಸಂಸದ ನಳಿನ್‌ಕುಮಾರ್ ಕಟೀಲ್, ಶಾಸಕ ಕೆ. ಅಭಯಚಂದ್ರ ಜೈನ್, ಮಾಜಿ ಸಚಿವ ಅಮರನಾಥ ಶೆಟ್ಟಿ, ವಿಧಾನಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಹಂಪಿ ವಿವಿ ವಿಶ್ರಾಂತ ಕುಲಪತಿ ಬಿ.ಎ. ವಿವೇಕ ರೈ ಮೊದಲಾದವರು ಉಪಸ್ಥಿತರಿದ್ದರು.

Exit mobile version