Site icon Kundapra.com ಕುಂದಾಪ್ರ ಡಾಟ್ ಕಾಂ

ಕೆನರಾ ಬ್ಯಾಂಕ್ ಬೈಂದೂರು ಶಾಖೆ ಲೋಕಾರ್ಪಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಜ್ಯೂನಿಯರ್ ಕಾಲೇಜು ಬಳಿಯ ಮೂಕಾಂಬಿಕಾ ಕಾಂಪ್ಲೆಕ್ಸ್‌ನಲ್ಲಿ ಕೆನರಾ ಬ್ಯಾಂಕ್ ಸಂಸ್ಥಾಪಕರ ದಿನಾಚರಣೆಯಂದು ಕೆನರಾ ಬ್ಯಾಂಕ್ ಬೈಂದೂರು ಶಾಖೆ ಲೋಕಾರ್ಪಣೆಗೊಂಡಿತು.

ಕೆನರಾ ಬ್ಯಾಂಕ್ ಸಹಾಯಕ ಮಹಾ ಪ್ರಬಂದಕ ರಾಜಶೇಖರ ಮೇಟಿ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ವಿಭಾಗಿಯ ಪ್ರಬಂಧಕ ಜಗನ್ನಾಥ್, ಕಟ್ಟಡದ ಮಾಲಿಕರಾದ ಮಂಜುನಾಥ್, ಶಿಕ್ಷಕ ಬಾಲಯ್ಯ ಶೇರುಗಾರ್, ಜ್ಯೂನಿಯರ್ ಕಾಲೇಜಿನ ಪ್ರಾಂಶುಪಾಲ ಪಾಲಾಕ್ಷಪ್ಪ, ಉದ್ಯಮಿ ವೆಂಕಟೇಶ ಕಿಣಿ, ನಾಗಪ್ಪ ಪೂಜಾರಿ, ಕೆನರಾ ಬ್ಯಾಂಕ್ ಬೈಂದೂರು ಶಾಖಾ ಪ್ರಬಂದಕ ಪ್ರಭಾಕರ ಶೆಟ್ಟಿ, ನೌಕರರಾದ ಬಸಪ್ಪ, ವಿಘ್ನೇಶ್ವರ್, ದೀಪಕ್, ಗಿರೀಶ್ ಭಂಡಾರಿ ಅತುಲ್ ಸೇರಿದಂತೆ ಇನ್ನಿರರು ಉಪಸ್ಥಿತಿದ್ದರು.

Exit mobile version