Kundapra.com ಕುಂದಾಪ್ರ ಡಾಟ್ ಕಾಂ

ಸೈಬರ್ ಪ್ರಪಂಚ ಕಾನೂನಿಗೆ ನಿತ್ಯವೂ ಸವಾಲು: ನ್ಯಾಯಾಧೀಶ ರಾಜಶೇಖರ್ ಪಾಟೀಲ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸೈಬರ್ ಪ್ರಪಂಚ ಕಾನೂನಿಗೆ ಹೊಸ ಬಗೆಯ ಸವಾಲು. ಸೈಬರ್ ಅಪರಾಧಗಳು ಹೊಸ ಹೊಸ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದೆ. ಒಂದು ಬಗೆಯ ಅಪರಾದವನ್ನು ಗುರುತಿಸಿ ಅದಕ್ಕೆ ಷರಾ ಬರೆಯುವ ವೇಳೆಗಾಗಲೇ ಅದೇ ಅಪರಾದ ಬೇರೆ ರೂಪದಲ್ಲಿ ಎದುರಾಗುತ್ತಿದೆ. ಎಂದು ಕುಂದಾಪುರ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ರಾಜಶೇಖರ್ ವಿ. ಪಾಟೀಲ್ ಹೇಳಿದರು.

ಕಾರ್ಟೂನು ಕುಂದಾಪ್ರ ಬಳಗದ ಸಾರಥ್ಯದಲ್ಲಿ ರೋಟರಿ ಕುಂದಾಪುರ ಸೌತ್ ಸಹಭಾಗಿತ್ವದಲ್ಲಿ ಇಲ್ಲಿನ ಕಲಾಮಂದಿರದಲ್ಲಿ ಜರುಗುತ್ತಿರುವ ಕಾರ್ಟೂನು ಹಬ್ಬದ ಮೂರನೇ ದಿನ ’ಸೈಬರಾಸುರ – ಯುವ ದೃಷ್ಠಿಯಲ್ಲಿ ಸೈಬರ್ ಪ್ರಪಂಚ’ ವಿಚಾರ ಸಂರ್ಕೀಣವನ್ನು ಉದ್ಘಾಟಿಸಿ ಮಾತನಾಡಿದರು.

ವ್ಯಂಗ್ಯಚಿತ್ರಗಳು ಮುಖದಲ್ಲಿ ನಗು ಮೂಡಿಸುವುದಲ್ಲದೇ ಸಾಮಾಜಿಕ ಸ್ಥಿತಿಗತಿಗಳನ್ನು ಮಾರ್ಮಿಕವಾಗಿ ತೆರಡಿಟುತ್ತದೆ. ರಾಜಕೀಯವನ್ನು ಟೀಕಿಸುವ ಜೊತೆಗೆ ಎಚ್ಚರಿಸುವ ಕೆಲಸವನ್ನು ಮಾಡುತ್ತದೆ. ಶಿಕ್ಷಣದಲ್ಲಿಯೂ ಕಾರ್ಟೂನು ಕಲಿಕೆ ಅವಳವಡಿಸಿದರೆ ಸೃಜನಾತ್ಮಕ ಕಲೆಗೆ ಸೂಕ್ತ ವೇದಿಕೆ ದೊರೆತಂತಾಗುವುದು ಎಂದರು.

ಕುಂದಾಪ್ರ ಡಾಟ್ ಕಾಂ ಸಂಪಾದಕ ಸುನಿಲ್ ಹೆಚ್. ಜಿ. ಬೈಂದೂರು ಮಾತನಾಡಿ ಪ್ರತಿ ಸೃಷ್ಠಿಗೂ ಎರಡು ಮುಖಗಳಿರುತ್ತವೆ. ನಾವು ಎಲ್ಲಿ ಹೇಗೆ ಯಾವ ಉದ್ದೇಶಕ್ಕೆ ಬಳಸುತ್ತೇವೆ ಎಂಬುದರ ಮೇಲೆ ಅದರ ಒಳ್ಳೆಯದು ಕೆಟ್ಟದ್ದು ನಿರ್ಧಾರವಾಗುತ್ತದೆ. ಅಂತರ್ಜಾಲದ ಬಳಕೆಯೂ ಅಷ್ಟೇ. ಅದರ ಇತಿ ಮಿತಿಗಳನ್ನು ಅರಿತು, ವಾಸ್ತವದ ಮಿತಿಯಲ್ಲಿಯೇ ಬಳಕೆ ಮಾಡಬೇಕು. ಸೈಬರ್ ಅಪರಾಧಗಳಿಗೆ ಬಲಿಯಾಗುತ್ತಿರುವವರು ಬಹುಪಾಲು ಮಂದಿ ಶಿಕ್ಷಿತರೇ ಆಗಿರುತ್ತಾರೆ. ವಿದ್ಯಾವಂತರೇ ಹೀಗೆ ಬಲಿಪಶುಗಳಾಗುತ್ತಿರುವುದು ದುರಂತ. ಸಾಮಾಜಿಕ ಜಾಲತಾಣಗಳು ನಮ್ಮ ಬಳಕೆಗೆ ಇರಬೇಕೇ ಹೊರತು ನಾವು ಅದರ ಮೋಡಿಗೆ ಒಳಗಾಗಬಾರದು.
ವೇದಿಕೆಯಲ್ಲಿ ರೋಟರಿ ಕುಂದಾಪುರ ಸೌತ್ ಅಧ್ಯಕ್ಷ ಓಸ್ಲಿನ್ ರೆಬೆಲ್ಲೊ, ಸದಸ್ಯ ರಮೇಶ್ ಭಟ್, ಮಂಗಳೂರು ಅಲ್ಫೈನ್ ಅಸೋಸಿಯೇಶನ್ ಜಾಹೀರ್ ಅಹಮ್ಮದ್ ಉಪಸ್ಥಿತರಿದ್ದರು.

ವ್ಯಂಗ್ಯಚಿತ್ರಕಾರ ಚಂದ್ರಶೇಖರ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಕಾರ್ಟೂನು ಹಬ್ಬದ ಸಂಘಟಕ ಸತೀಶ್ ಆಚಾರ್‍ಯ ಸ್ವಾಗತಿಸಿದರು. ಕಾರ್ಟೂನಿಷ್ಠರಾದ ಚಂದ್ರ ಗಂಗೊಳ್ಳಿ, ಸಂತೋಷ್ ಸಹಿಹಿತ್ಲು ಸಹಕರಿಸಿದರು. ನ್ಯಾಯವಾದಿ ರವಿಕುಮಾರ್ ಗಂಗೊಳ್ಳಿ ನಿರೂಪಿಸಿದರು.

Exit mobile version