Kundapra.com ಕುಂದಾಪ್ರ ಡಾಟ್ ಕಾಂ

ರೈಲಿನಲ್ಲಿ ಲಕ್ಷಾಂತರ ರೂ. ಚಿನ್ನಾಭರಣ; ನಗದು ಕಳವು

ಕುಂದಾಪುರ: ಥಾಣಾದಿಂದ ಕುಂದಾಪುರಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಅವರ ಬ್ಯಾಗ್‌ನ್ನು ಹರಿದು ಲಕ್ಷಾಂತರ ರೂ. ಚಿನ್ನಾಭರಣ ಹಾಗೂ ನಗದನ್ನು ಅಪಹರಿಸಲಾಗಿದೆ ಎಂದು ಆಜ್ರಿ ಗ್ರಾಮದ ಹೊಸಬಾಳು ನಿವಾಸಿ ಶೆ„ಲಜಾ ಅವರು ಶಂಕರನಾರಾಯಣ ಠಾಣೆಯಲ್ಲಿ ದೂರು ನೀಡಿದ್ದಾರೆ.

ಎ.9ರಂದು ಮಧ್ಯಾಹ್ನ ಥಾಣಾದಿಂದ ಮತ್ಸಗಂಧ ರೈಲಿನಲ್ಲಿ ಮಕ್ಕಳೊಂದಿಗೆ ಕುಂದಾಪುರಕ್ಕೆ ಪ್ರಯಾಣ ಮಾಡಿದ್ದು, ಎ.10ರಂದು ರಂದು ಬೆಳಗ್ಗೆ 6:30 ಕ್ಕೆ ಗಂಟೆಗೆ ಕುಂದಾಪುರ ಮೂಡ್ಲಕಟ್ಟೆ ರೈಲ್ವೆ ಸ್ಟೇಶನ್‌ಗೆ ರೈಲಿನಿಂದ ಬಂದು ಇಳಿದು, ನಂತರ ಅಲ್ಲಿಂದ ಮನೆಗೆ ಹೋಗಿ ರಾತ್ರಿ ಮನೆಯಲ್ಲಿ ಬ್ಯಾಗ್‌ನಿಂದ‌ ಬಟ್ಟೆ ಹಾಗೂ ಚಿನ್ನದ ಆಭರಣ ತೆಗೆಯಲು ನೋಡಿದಾಗ, ಬ್ಯಾಗಿನ ಜೀಪ್‌ನಿಂದ ಸ್ವಲ್ಪ ಮೇಲ್ಗಡೆ ಯಾವುದೋ ಹರಿತವಾದ ವಸ್ತುವಿನಿಂದ ಬ್ಯಾಗ್‌ ಕತ್ತರಿಸಿ, ಬ್ಯಾಗಿನ ಒಳಗಡೆ ನಗದು ಹಣ ಚಿನ್ನಾಭರಣಗಳನ್ನು ಕಳವು ಮಾಡಿದ ಬಗ್ಗೆ ತಿಳಿಸು ಬಂದಿರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಎರಡು ಪರ್ಸ್‌ನಲ್ಲಿರುವ ಚಿನ್ನದ ಆಭರಣಗಳಿರುವ ಬಾಕ್ಸನಲ್ಲಿ ಇದ್ದ ಕರಿಮಣಿ ಸರ, ನೆಕ್ಲೇಸ್‌, ಹವಳ ಸರ, ಮಕ್ಕಳ ಚಿನ್ನದ ಚೆ„ನ್‌, ಮೂರು ಜೊತೆ ಕಿವಿಯ ಓಲೆ, ಮೂರು ಉಂಗುರ, ಮೂಗಿನ ನತ್ತು, ಎರಡು ಸಣ್ಣ ಚಿನ್ನದ ನಳಿನ ಪಕ್ಕ ಒಟ್ಟು ಅಂದಾಜು ಸುಮಾರು 22 ಪವನ್‌ ತೂಕದ, ಒಟ್ಟು ಸುಮಾರು 3 ಲಕ್ಷ ರೂ. ಚಿನ್ನಾಭರಣ ಹಾಗೂ 7 ಸಾವಿರ ನಗದನ್ನು ಯಾರೋ ಕಳ್ಳರು ಕಳವು ಮಾಡಿರುತ್ತಾರೆ.ಎಂದು ದೂರಿನಲ್ಲಿ ತಿಳಿಸಿರುತ್ತಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version