Kundapra.com ಕುಂದಾಪ್ರ ಡಾಟ್ ಕಾಂ

ಗುರುಕುಲ ವಿದ್ಯಾಸಂಸ್ಥೆಯ ವಾರ್ಷಿಕ ಸಂಚಿಕೆ ಗುರುಸ್ಪರ್ಶ ಬಿಡುಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯಾರ್ಥಿಗಳ ಸರ್ವತೋಮುಖ ವಿಕಾಸಕ್ಕೆ ಕೇವಲ ಕಲಿಕಾ ವಿಷಯಗಳು ಮಾತ್ರ ಮುಖ್ಯ ಪಾತ್ರ ವಹಿಸದೆ, ಸೃಜನಾತ್ಮಕ ಬರವಣಿಗೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವದ ಮೇಲೆ ಗುರುತರ ಪಾತ್ರ ವಹಿಸುತ್ತವೆ. ಶಾಲೆಯಲ್ಲಿ ಮಕ್ಕಳು ತಮ್ಮ ಪಠ್ಯ ವಿಷಯದ ಜೊತೆಗೆ ವಿಭಿನ್ನ ಬಗೆಯ ಸಹ ಪಟ್ಯ ಚಟುವಟಿಕೆಗಳನ್ನು ಕೈಗೊಳ್ಳುವುದರಿಂದ ಬೌದ್ಧಿಕ ವಿಕಾಸ ಪೂರಕವಾಗುತ್ತದೆ ಎಂದು.ಎನ್.ವಿನಯ್. ಹೆಗಡೆ, ಕುಲಪತಿಗಳು ನಿಟ್ಟೆ ಡೀಮ್ದ್ ಯುನಿವರ್ಸಿಟಿ ಅಭಿಪ್ರಾಯ ಪಟ್ಟರು.

ಅವರು ಗುರುಕುಲ ವಿದ್ಯಾಸಂಸ್ಥೆ ಮತ್ತು ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಗುರುಕುಲ ವಾರ್ಷಿಕ ಸಂಚಿಕೆ ’ಗುರುಸ್ಪರ್ಶ’ ಬಿಡುಗಡೆ ಮಾಡಿ ಮಾತನಾಡಿದರು. ಶಾಲಾ ವಾರ್ಷಿಕ ಸಂಚಿಕೆ ವಿದ್ಯಾರ್ಥಿಗಳ ಮತ್ತು ಶಾಲೆಯ ವಾರ್ಷಿಕ ಕ್ರೀಯಾ ಚಟುವಟಿಕೆಗಳ ತೋರಿಸುವ ಕೈಗನ್ನಡಿ ಎಂದು ಹೇಳಿದರಲ್ಲದೆ, ಈ ವಾರ್ಷಿಕ ಸಂಚಿಕೆಯ ವಿದ್ಯಾರ್ಥಿಗಳ ಮತ್ತು ವಿದ್ಯಾಸಂಸ್ಥೆಯ ನೆನಪಿನ ಭುತ್ತಿ ಎಂದು ಬಣ್ಣಿಸಿದರು. ಗುರುಸ್ಪರ್ಶ ವಾರ್ಷಿಕ ಸಂಚಿಕೆ, ವಾರ್ಷಿಕೋತ್ಸವದ ಸಮಾರಂಭದಲ್ಲಿ ಬಿಡುಗಡೆಗೊಳ್ಳುತ್ತಿರುವುದು ಅರ್ಥಪೂರ್ಣವಾಗಿದೆ. ಹಾಗೆಯೇ ಪ್ರತಿವರ್ಷವು ಇನ್ನಷ್ಟು ಸೃಜನಾತ್ಮಕ ಬರವಣಿಗೆಯೊಂದಿಗೆ ಬಿಡುಗಡೆಗೊಳ್ಳಲಿ ಎಂದು ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಬಾಂಡ್ಯ ಎಜ್ಯುಕೇಶನಲ್ ಟ್ರಸ್ಟ್ ನ ಸಂಸ್ಥಾಪಕರಾದ ಶ್ರೀ.ಬಿ.ಅಪ್ಪಣ್ಣ.ಹೆಗ್ಡೆಯವರು ಮಾತನಾಡಿ ಗುರುಕುಲ ವಿದ್ಯಾಸಂಸ್ಥೆಯ ಗುರುಸ್ಪರ್ಶ ವಾರ್ಷಿಕ ಸಂಚಿಕೆಯ ಹೆಸರು ಅರ್ಥಪೂರ್ಣವಾಗಿದೆಯಲ್ಲದೆ ಇದು ವಿದ್ಯಾರ್ಥಿಗಳ ಮತ್ತು ಶಾಲಾ ಒಟ್ಟಾರೆ ಚಟುವಟಿಕೆಗಳ ಮೌಲ್ಯಾಂಕದ ಪಟ್ಟಿಯಂತೆ ಎಂದು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಹೊಗಳಿದರು.

ಈ ವಾರ್ಷಿಕ ಸಂಚಿಕೆಯನ್ನು ಬಿಡುಗಡೆ ಮಾಡಲು ರುವಾರಿಗಳಾದ ಬಾಂಡ್ಯ ಎಜ್ಯುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಹಕ ನಿರ್ದೆಶಕರುಗಳಾದ ಶ್ರೀ.ಸುಭಾಶ್ಚಂದ್ರ .ಶೆಟ್ಟಿ ಹಾಗೂ ಶ್ರೀಮತಿ.ಅನುಪಮ.ಎಸ್.ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅದಲ್ಲದೆ ಗುರುಕುಲ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಶ್ರೀ.ಶಾಯಿಜು.ಕೆ.ಆರ್.ನಾಯರ್ ರವರು ಹಾಗೆಯೇ ಗುರುಕುಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ.ಚೆನ್ನಬಸಪ್ಪರವರು ಹಾಜರಿದ್ದರು. ಕುಮಾರಿ.ಅಕ್ಷರಿ ಸ್ವಾಗತಿಸಿದರೆ, ಕುಮಾರಿ.ಆಫ್ರಾ ಕಾರ್ಯಕ್ರಮ ನಿರೂಪಿಸಿದರು.

Exit mobile version