Kundapra.com ಕುಂದಾಪ್ರ ಡಾಟ್ ಕಾಂ

ಕಾನೂನಿಗೆ ನಾಗರಿಕತೆಯಷ್ಟೇ ಇತಿಹಾಸವಿದೆ. ವಕೀಲರ ದಿನಾಚರಣೆಯಲ್ಲಿ ಜಸ್ಟಿಸ್ ಆರ್.ವಿ. ಪಾಟೀಲ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರಪಂಚದ ಇತಿಹಾಸ ಹಾಗೂ ಅಭಿವೃದ್ಧಿ ಹೊಂದುತ್ತಿರುವ ನಾಗರಿಕತೆಯಷ್ಟೇ ಕಾನೂನು ಹಳೆಯತಾಗಿದ್ದು. ನಾಗರಿಕ ಸಮಾಜದ ಪ್ರತಿ ಚಟುವಟಿಕೆಯೂ ಕಾನೂನಿನಿಂದಲೇ ನಿಯಂತ್ರಿಸಲ್ಪಡುತ್ತದೆ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜಶೇಖರ ವಿ. ಪಾಟೀಲ್ ಹೇಳಿದರು.

ಅವರು ಕುಂದಾಪುರ ಬಾರ್ ಅಸೋಸಿಯೇಶನ್ ಆಶ್ರಯದಲ್ಲಿ ನ್ಯಾಯಾಲಯದ ಆವರಣದಲ್ಲಿ ಜರುಗಿದ ವಕೀಲರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ವಕೀಲರಿಗೆ ತಮ್ಮ ವೃತ್ತಿಯಲ್ಲಿ ಗೌರವ ಇರಬೇಕು. ತಾವು ಓದುವ ಕಾನೂನು ಪುಸ್ತಕಗಳಿಂದ ನ್ಯಾಯಾಲಯಕ್ಕೆ ಏನು ಹೇಳಬೇಕು ಎಂಬ ತಿಳುವಳಿಕೆ ಹಾಗೂ ತನ್ನ ಕಕ್ಷಿದಾರನನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳುವ ಚಾಕಚಕ್ಯತೆ ಇದ್ದರೆ ವೃತ್ತಿಯಲ್ಲಿ ಯಶಸ್ಸುನ್ನು ಕಾಣಲು ಸಾಧ್ಯವಿದೆ ಎಂದವರು ಹೇಳಿದರು.

ಮಂಗಳೂರಿನ ಹಿರಿಯ ನ್ಯಾಯವಾದಿ ಎಂ.ವಿ ಶಂಕರ ಭಟ್ ಉಪನ್ಯಾಸ ನೀಡಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಕುಂದಾಪುರ ಸಿವಿಲ್ ನ್ಯಾಯಾಧೀಶ್ ಪ್ರೀತ್ ಜೆ, ಹೆಚ್ಚುವರಿ ನ್ಯಾಯಾಧೀಶೆ ಲಾವಣ್ಯ ಎಚ್. ಎನ್. ಉಪಸ್ಥಿತರಿದ್ದರು.

ಕುಂದಾಪುರ ಬಾರ್ ಅಸೋಸಿಯೇಶನ್ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ರವಿಶ್ಚಂದ್ರ ಶೆಟ್ಟಿ ವಂದಿಸಿದರು. ನ್ಯಾಯವಾದಿ ರಾಘವೇಂದ್ರ ಚರಣ ನಾವಡ ವಂದಿಸಿದರು.

Exit mobile version