Site icon Kundapra.com ಕುಂದಾಪ್ರ ಡಾಟ್ ಕಾಂ

ದೀಪಾರಾಧನೆಯಿಂದ ಅಂಧಕಾರ ದೂರ: ಪ್ರೇಮಾನಂದ ಶೆಟ್ಟಿ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ದೀಪಾರಾಧನೆಯಿಂದ ನಮ್ಮ ಜೀವನದಲ್ಲಿನ ಅಂಧಕಾರ ಕತ್ತಲು ದೂರವಾಗುತ್ತದೆ. ಪ್ರತಿನಿತ್ಯ ದೇವತಾರಾಧನೆಯಿಂದ ಜೀವನದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ. ಸತ್ಕಾರ್ಯ ಹಾಗೂ ಸತ್ಕರ್ಮಗಳಿಂದ ಜೀವನ ಪಾವನವಾಗಿ ದೇವರ ಅನುಗ್ರಹ ಸಿದ್ಧಿಸುತ್ತದೆ ಎಂದು ವಿಶ್ವ ಹಿಂದೂ ಪರಿಷತ್‌ನ ಉಪಾಧ್ಯಕ್ಷ ಪ್ರೇಮಾನಂದ ಶೆಟ್ಟಿ ಹೇಳಿದರು.

ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಜರಗಿದ ಗಂಗೊಳ್ಳಿಯ ಶ್ರೀ ವೀರೇಶ್ವರ ದೀಪೋತ್ಸವ ಸೇವಾ ಸಮಿತಿಯ ೯ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಧಾರ್ಮಿಕ ಪ್ರವಚನ ನೀಡಿ ಮಾತನಾಡಿದರು.

ಕುಂದಾಪುರ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿದ್ಧಾಪುರ ಕೆನರಾ ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ರತ್ನಾಕರ ಗಾಣಿಗ ಗಂಗೊಳ್ಳಿ, ಬೈಂದೂರು ಉಪವಲಯ ಅರಣ್ಯಾಧಿಕಾರಿ ಸದಾಶಿವ ಕೆ. ನಾಯಕವಾಡಿ, ಶ್ರೀ ಶಾರದೋತ್ಸವ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ಪ್ರೇಮಾ ಸಿ.ಎಸ್. ಪೂಜಾರಿ, ಶ್ರೀ ರಾಘವೇಂದ್ರ ಆರಾಧನಾ ಮಹೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಎಂ., ಕುಂದಾಪುರದ ಉದ್ಯಮಿ ಸತೀಶ ಕಾನೋಜಿ, ಶ್ರೀ ವೀರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಜಿ.ಲಕ್ಷ್ಮೀನಾರಾಯಣ ಭಟ್, ಗಂಗೊಳ್ಳಿಉ ಉದ್ಯಮಿ ಎಂ.ಜಿ.ರಾಘವೇಂದ್ರ ಭಂಡಾರ್‌ಕಾರ್, ದೀಪೋತ್ಸವ ಸೇವಾ ಸಮಿತಿಯ ಅಧ್ಯಕ್ಷ ಗೋಪಾಲ ಖಾರ್ವಿ ದಾವನಮನೆ, ಕಾರ್ಯದರ್ಶಿ ರಾಜಾ ಟಿ.ಎಸ್. ಮೊದಲಾದವರು ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಕೃಷ್ಣ ಪೂಜಾರಿ ಹೆಮ್ಮಾಡಿಮನೆ ಸ್ವಾಗತಿಸಿದರು. ಸುಂದರ ಜಿ. ಕಾರ್ಯಕ್ರಮ ನಿರೂಪಿಸಿದರು.

Exit mobile version