Kundapra.com ಕುಂದಾಪ್ರ ಡಾಟ್ ಕಾಂ

ಉಡುಪಿಯಲ್ಲಿ ಸದ್ಯದಲ್ಲೇ ಇ ಲಾಬಿ ಕೇಂದ್ರ: ಜಯರಾಮ ಭಟ್‌

ಉಡುಪಿ: ಮಂಗಳೂರಿನಂತೆ ಉಡುಪಿಯಲ್ಲಿಯೂ ಇ ಲಾಬಿ ಕೇಂದ್ರ ತೆರೆಯಲಾಗುವುದು ಎಂದು ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಮತ್ತು ಸಿಇಒ ಪಿ. ಜಯರಾಮ ಭಟ್‌ ತಿಳಿಸಿದ್ದಾರೆ.

Karnataka bank rigional office

    ಕಿನ್ನಿಮೂಲ್ಕಿ ಶಾಂತಾ ಕಾಂಪ್ಲೆಕ್ಸ್‌ನಲ್ಲಿ ನಡೆದ ಕರ್ಣಾಟಕ ಬ್ಯಾಂಕ್‌ನ 11ನೆಯ ಪ್ರಾದೇಶಿಕ ಕಚೇರಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗ ಡಿಜಿಟಲ್‌ ಬ್ಯಾಂಕಿಂಗ್‌ ವ್ಯವಹಾರ (ಆಲ್ಟರೆ°àಟಿವ್‌ ಡೆಲಿವರಿ ಸಿಸ್ಟಮ್‌) ಜಾಸ್ತಿಯಾಗುತ್ತಿರುವುದರಿಂದ ಇ ಲಾಬಿ ಸೌಲಭ್ಯವನ್ನು ಉಡುಪಿಯ ಸೂಕ್ತ ಸ್ಥಳದಲ್ಲಿ ಆರಂಭಿಸಲಾಗುವುದು. ಇದರಲ್ಲಿ ಹಣ ಹಾಕುವುದು, ತೆಗೆಯುವುದು, ಪಾಸ್‌ಬುಕ್‌ ಎಂಟ್ರಿ ಮಾಡುವುದು, ಪಾಸ್‌ಬುಕ್‌ ಪ್ರಿಂಟಿಂಗ್‌ ಮೊದಲಾದ ಸೌಲಭ್ಯಗಳು ಇರುತ್ತವೆ. ಇದರಲ್ಲಿ ಮೂರ್‍ನಾಲ್ಕು ಬಗೆಯ ಯಂತ್ರಗಳು ಇದ್ದು ಗ್ರಾಹಕರು ಸ್ವತಂತ್ರವಾಗಿ ತಮ್ಮ ಕೆಲಸ ಮಾಡಿಕೊಳ್ಳಬಹುದು ಎಂದರು.

ಮುಂದಿನ ಆರು ತಿಂಗಳಲ್ಲಿ ಬ್ಯಾಂಕ್‌ ವ್ಯವಹಾರವನ್ನು 1 ಲ. ಕೋ. ರೂ.ಗೆ ಏರಿಸಲಾಗುವುದು. 50 ಶಾಖೆ, 250 ಎಟಿಎಂಗಳನ್ನು ತೆರೆಯಲಾಗುವುದು. ಸಾಮಾಜಿಕ ಹೊಣೆಗಾರಿಕೆಯನ್ವಯ 2 ಕೋ. ರೂ. ಮೊತ್ತವನ್ನು ಈ ವರ್ಷ ವಿನಿಯೋಗಿಸಲಾಗಿದೆ ಎಂದು ಅವರು ತಿಳಿಸಿದರು.

Exit mobile version