Kundapra.com ಕುಂದಾಪ್ರ ಡಾಟ್ ಕಾಂ

ತಾಯಿ ವಾತ್ಸಲ್ಯದ ಸಾಕಾರಮೂರ್ತಿ: ಶ್ರೀ ಭಾರತೀತೀರ್ಥ ಮಹಾಸ್ವಾಮಿ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಷ್ಟ ಬಂದಾಗ ಮೊದಲು ನೆನಪಿಗೆ ಬರುವುದು ತಾಯಿ, ತಾಯಿ ಪ್ರೀತಿ ಮತ್ತು ವಾತ್ಸಲ್ಯದ ಸಾಕಾರಮೂರ್ತಿಯಾಗಿದ್ದು, ಈ ಸ್ಥಾನ ಬೇರೆ ಯಾರಿಗೂ ನೀಡಲು ಸಾಧ್ಯವಿಲ್ಲ. ಮಹಾತಾಯಿ ಸ್ಮರಣೆ ಪ್ರತಿಯೊಬ್ಬರಿಗೂ ಅತ್ಯಂತ ಅವಶ್ಯ ಎಂದು ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿ ಹೇಳಿದರು.

ಮಹಾಕಾಳಿ ದೇವರ ಪ್ರತಿಷ್ಠಾ ರಜತಮಹೋತ್ಸವದ ನಿಮಿತ್ತ ನಡೆದ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದ ಅಷ್ಟೋತ್ತರ ಸಹಸ್ರ ಬ್ರಹ್ಮಕುಂಭಾಭಿಷೇಕ ಮತ್ತು ಶತ ಚಂಡಿಕಾಯಾಗ ಮಹೋತ್ಸವದಲ್ಲಿ ಆಶೀರ್ವಚನ ನೀಡಿ, ಮಾತನಾಡಿದರು. ನಮ್ಮ ಗುರುಗಳು ಇಲ್ಲಿ ದೇವಸ್ಥಾನಕ್ಕೆ ಶಿಲಾನ್ಯಾಸ ಮಾಡಿದ್ದರು. ನಾನು ಕುಂಭಾಭಿಷೇಕ ನೆರವೇರಿಸಿದ್ದೇನೆ. ಪ್ರಸ್ತುತ ನಮ್ಮ ಶಿಷ್ಯರಿಂದ ಸಹಸ್ರ ಕುಂಭಾಭಿಷೇಕ ನೆರವೇರುತ್ತಾ ಇರುವುದು ವಿಶೇಷವಾಗಿದೆ. ಹೀಗೆ ಮೂರು ಮಂದಿ ಜಗದ್ಗುರುಗಳು ಈ ಕ್ಷೇತ್ರದ ಧಾರ್ಮಿಕ ಕಾರ್ಯಕ್ರಗಳಲ್ಲಿ ಪಾಲ್ಗೊಂಡಿರುವುದು ಒಂದು ಭಾಗ್ಯ ಎಂದು ಹೇಳಿದರು.

ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿ ಅವರ ದಿವ್ಯ ಉಪಸ್ಥಿತಿಯಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಬ್ರಹ್ಮಕುಂಭಾಭಿಷೇಕ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಹಾಸ್ವಾಮಿಯವರ ಪಾದಪೂಜೆ ಹಾಗೂ ಫಲ ಪುಷ್ಪ ಸಮರ್ಪಣೆ ನಡೆಯಿತು.

ಶ್ರೀ ಮಹಾಕಾಳಿ ದೇವಸ್ಥಾನದ ಅಧ್ಯಕ್ಷ ಜಯಾನಂದ ಖಾರ್ವಿ, ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಸ್ವಾಮಿ ದ್ವಯರನ್ನು ಶ್ರೀ ಮಹಾಕಾಳಿ ದೇವಸ್ಥಾನಕ್ಕೆ ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.

Exit mobile version