Kundapra.com ಕುಂದಾಪ್ರ ಡಾಟ್ ಕಾಂ

ಶಿಕ್ಷಣದಲ್ಲಿ ಖಾಸಗಿ-ಸರಕಾರಿ ತಾರತಮ್ಯ ಬೇಡ :ಅಣ್ಣಾಮಲೈ

ಉಡುಪಿ: ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಸಂಸ್ಥೆಗಳು ಖಾಸಗಿ-ಸರಕಾರಿ ಎನ್ನುವ ತಾರತಮ್ಯದಿಂದ ಹೊರತಾಗಿದ್ದರೆ ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗಲಿದೆ. ಪ್ರಸ್ತುತ ಸಮಾಜದಲ್ಲಿರುವ ಗಣ್ಯರು, ಸಾಧಕರು, ವಿಜ್ಞಾನಿಗಳು ಸರಕಾರಿ ಶಾಲೆಗಳಲ್ಲಿಯೇ ಕಲಿತು ಬಂದವರು. ಈ ನೆಲೆಯಲ್ಲಿ ಸರಕಾರಿ ಶಾಲೆ ಬಗ್ಗೆ ಅಸಡ್ಡೆ ತೋರದೆ ವಿದ್ಯಾಭ್ಯಾಸ ಮಾಡಬೇಕಾಗಿದೆ ಎಂದು ಎಸ್‌ಪಿ ಅಣ್ಣಾಮಲೈ ಅಭಿಪ್ರಾಯಪಟ್ಟರು.

ಗರಡಿಮಜಲು ಸ.ಮಾ.ಹಿ.ಪ್ರಾ. ಶಾಲೆ ಮತ್ತು ಹಳೆವಿದ್ಯಾರ್ಥಿ ಸಂಘದ ಸುವರ್ಣ ಮಹೋತ್ಸವ ಹಾಗೂ ಮಾತೃಶಾಲಾ 66ನೇ ವಾರ್ಷಿಕ ಮಹೋತ್ಸವ ಸಮಾರಂಭದಲ್ಲಿ ನವೀಕೃತ ಲಹರಿ ರಂಗ ಮಂಟಪದ ಉದ್ಘಾಟನೆ ನೆರವೇರಿಸಿ, ಹಸ್ತಪ್ರತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಊರಿನ ಗಣ್ಯರು, ಹಳೆವಿದ್ಯಾರ್ಥಿ ಸಮೂಹ ಸರಕಾರಿ ಶಾಲೆಗೆ ಸಾಕಷ್ಟು ಪ್ರೋತ್ಸಾಹ ನೀಡುವುದರಿಂದ ಶಾಲೆ ಇನ್ನೂ ಎತ್ತರಕ್ಕೆ ಬೆಳೆಯಲು ಸಾಧ್ಯ. ಇಲ್ಲಿನ ಸ್ಥಳೀಯರು-ಹಳೆವಿದ್ಯಾರ್ಥಿಗಳು ಶಾಲೆಯ ಬಗ್ಗೆ ವಹಿಸಿದ್ದ ಕಾಳಜಿ ಶ್ಲಾಘನೀಯ ಎಂದು ಅವರು ಹೇಳಿದರು.

Exit mobile version