Site icon Kundapra.com ಕುಂದಾಪ್ರ ಡಾಟ್ ಕಾಂ

ರವೀಂದ್ರ ಭಂಡಾರಿ ಅವರಿಗೆ ಅಲೂಮ್ನಿ ಅವಾರ್ಡ್ ನೀಡಿ ಸಮ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಸಿದ್ದಾಪುರ: ಕೆನರಾ ಬ್ಯಾಂಕ್‌ನ ಬೆಂಗಳೂರು ಕೇಂದ್ರ ಕಚೇರಿಯ ಜನರಲ್ ಮ್ಯಾನೇಜರ್ ರವೀಂದ್ರ ಭಂಡಾರಿ ಅವರ ಗ್ರಾಮೀಣ ಅಭಿವೃದ್ಧಿ ಹಾಗೂ ಸಾಮಾಜಿಕ ಸೇವೆಯನ್ನು ಗುತಿಸಿರುವ ಬೆಂಗಳೂರು ಹೆಬ್ಬಾಳದ ಆಲೂಮ್ನಿ ಅಸೋಸಿಯೇಶನ್ ಯೂನಿವರ್ಸಿಟಿ ಆಫ್ ಅಗ್ರಿಕಲ್ಚರಲ್ ಸಾಯನ್ಸ್ ಇವರ ವತಿಯಿಂದ ೨೦೧೫-೧೬ನೇ ಸಾಲಿನ ವಿಶೇಷ ಅಲೂಮ್ನಿ ಅವಾರ್ಡ್‌ನ್ನು ನೀಡಿ ಗೌರವಿಸಿದೆ.

ರವೀಂದ್ರ ಭಂಡಾರಿ ಅವರಿಗೆ ೨೦೧೫-೧೬ನೇ ಸಾಲಿನ ವಿಶೇಷ ಅಲೂಮ್ನಿ ಅವಾರ್ಡ್‌ನ್ನು ಕೇಂದ್ರ ಸಚಿವ ಸದಾನಂದ ಗೌಡ, ಹೆಬ್ಬಾಳ ಶಾಸಕ ನಾರಾಯಣ ಸ್ವಾಮಿ, ಉಪ ಕುಲಪತಿ ಶಿವಣ್ಣ ಹಾಗೂ ಮಾಜಿ ಉಪಕುಲಪತಿ ನಾರಾಯಣ ಗೌಡ ಅವರು ನೀಡಿ, ಗೌರವಿಸಿದ್ದಾರೆ. ಕೆನರಾ ಬ್ಯಾಂಕ್‌ನ ಬೆಂಗಳೂರು ಕೇಂದ್ರ ಕಚೇರಿಯ ಜನರಲ್ ಮ್ಯಾನೇಜರ್ ಆಗಿರುವ ರವೀಂದ್ರ ಭಂಡಾರಿ ಅವರು ಮೂಲತ ಕುಂದಾಪುರ ತಾಲೂಕಿನ ಹಾಲಾಡಿಯ ಜಿ. ರಾಜೀವ ಭಂಡಾರಿ ಹಾಗೂ ರುಕ್ಮೀಣಿ ಭಂಡಾರಿ ದಂಪತಿಗಳ ಪತ್ರರಾಗಿದ್ದಾರೆ. ಅಗ್ರಿಕಲ್ಚರಲ್ಲಿ ಬಿ.ಎಸ್‌ಸಿ ಮಾಡಿರುವ ರವೀಂದ್ರ ಭಂಡಾರಿ ಅವರು ೧೯೮೨ರಲ್ಲಿ ಕೆನರಾ ಬ್ಯಾಂಕಿಗೆ ಅಗ್ರಿಕಲ್ಚರಲ್ ಅಽಕಾರಿಯಾಗಿ ಸೇರ್ಪಡೆಗೊಂಡರು. ಸುದಿರ್ಘವಾಗಿ ೩೪ ವರ್ಷಗಳ ಕಾಲ ವಿವಿಧ ಶಾಖೆಗಳಲ್ಲಿ ಸೇವೆ ಸಲ್ಲಿಸಿ, ಇದೀಗ ಕೆನರಾ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಜನರಲ್ ಮ್ಯಾನೇಜರ್ ಸೇವೆ ಸಲ್ಲಿಸುತ್ತಿದ್ದಾರೆ.

Exit mobile version