Kundapra.com ಕುಂದಾಪ್ರ ಡಾಟ್ ಕಾಂ

ನಾಗಾರಾಧನೆಯಿಂದ ನಮ್ಮ ಇಷ್ಟಾರ್ಥ ಸಿದ್ಧಿ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ನಾಗಾರಾಧನೆಯಿಂದ ನಮ್ಮ ಇಷ್ಟಾರ್ಥಗಳೆಲ್ಲವೂ ನೆರವೇರುತ್ತವೆ. ನಮಗೆ ಕಣ್ಣಿಗೆ ಕಾಣಸಿಗುವ ಪ್ರತ್ಯಕ್ಷ ದೇವರಾದ ನಾಗನನ್ನು ಭಕ್ತಿಶ್ರದ್ಧೆಯಿಂದ ಪೂಜಿಸಬೇಕು. ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳು ಪ್ರತಿನಿತ್ಯ ಶಾಸ್ತ್ರೋಕ್ತವಾಗಿ ನಡೆದರೆ ಊರಿನಲ್ಲಿ ಎಲ್ಲರೂ ಕ್ಷೇಮದಿಂದ ಇರಲು ಸಾಧ್ಯ ಮತ್ತು ಯಾವುದೇ ಕ್ಷಾಮವಿಲ್ಲದೆ ಎಲ್ಲರೂ ಸುಖದಿಂದ ಬಾಳಲು ಸಹಾಯಕವಾಗಲಿದೆ ಎಂದು ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿ ಅವರ ಶಿಷ್ಯ ಶ್ರೀ ವಿದುಶೇಖರ ಭಾರತೀ ಸ್ವಾಮೀಜಿ ಹೇಳಿದರು.

ಅವರು ಗುಜ್ಜಾಡಿಯ ಬೆಣ್ಗೆರೆಯಲ್ಲಿರುವ ಶ್ರೀ ನಾಗ ದೇವಸ್ಥಾನಕ್ಕೆ ಚಿತ್ತೈಸಿ ಶ್ರೀದೇವರ ದರ್ಶನ ಪಡೆದು ಭಕ್ತರನ್ನು ಆಶೀರ್ವದಿಸಿ ಮಾತನಾಡಿದರು. ಶ್ರೀ ಶೃಂಗೇರಿ ಮಠಕ್ಕೂ ಬಾಡುಡಿ ಮೇಸ್ತ ಸಮಾಜಕ್ಕೂ ಅವಿನಾಭಾವ ಸಂಬಂಧವಿದೆ. ಇಲ್ಲಿನ ಭಕ್ತರು ಪ್ರತಿವರ್ಷ ಮಠದ ಮಹಾಸ್ವಾಮಿಗಳು ದರ್ಶನ ಪಡೆದು ಸ್ವಾಮೀಜಿಯವರ ಅನುಗ್ರಹಕ್ಕೆ ಪ್ರಾಪ್ತರಾಗುತ್ತಿದ್ದು, ಶ್ರೀದೇವರ ಮತ್ತು ಗುರುಗಳ ಆಶೀರ್ವಾದದಿಂದ ಸಮಾಜ ಅಭಿವೃದ್ಧಿ ಹೊಂದಿ ಶ್ರೀದೇವರ ಸತ್ಕಾರ್ಯಗಳನ್ನು ನಿರಂತರವಾಗಿ ನಡೆಸುವಂತಾಗಲಿ ಎಂದು ಆಶೀರ್ವದಿಸಿದರು.

ಇದೇ ಸಂದರ್ಭ ದೇವಳದ ವಠಾರದ ನೂತನವಾಗಿ ನಿರ್ಮಾಣಗೊಳ್ಳಲಿರುವ ಪಾಕ ಶಾಲೆಗೆ ಶ್ರೀಗಳು ಶಿಲಾನ್ಯಾಸ ನೆರವೇರಿಸಿದರು. ಶ್ರೀ ನಾಗದೇವಸ್ಥಾನದ ಅಧ್ಯಕ್ಷ ಉಮೇಶ ಮೇಸ್ತ, ಕೃಷ್ಣ ಆರ್.ಮೇಸ್ತ, ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ ಮೇಸ್ತ, ಶ್ರೀ ಸುಬ್ರಹ್ಮಣ್ಯೇಶ್ವರ ಯುತ್ ಕ್ಲಬ್ ಅಧ್ಯಕ್ಷ ಉದಯ ಮೇಸ್ತ, ಶ್ರೀಧರ ವಿ.ಮೇಸ್ತ, ಪ್ರಕಾಶ ಎನ್.ಮೇಸ್ತ, ಶ್ರೀಧರ ಮೇಸ್ತ, ಮಹಿಳಾ ಸಂಘದ ಸದಸ್ಯರು, ಶ್ರೀ ಸುಬ್ರಹ್ಮಣ್ಯೇಶ್ವರ ಯುತ್ ಕ್ಲಬ್‌ನ ಸದಸ್ಯರು, ಊರಿನ ಭಕ್ತರು ಮೊದಲಾದವರು ಉಪಸ್ಥಿತರಿದ್ದರು. ಶ್ರೀ ಶೃಂಗೇರಿ ಮಠದ ಡಾ.ಎಚ್.ವಿ.ನರಸಿಂಹಮೂರ್ತಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

Exit mobile version