Kundapra.com ಕುಂದಾಪ್ರ ಡಾಟ್ ಕಾಂ

ಏಡ್ಸ್ ಅರಿವಿನ ಬಗ್ಗೆ ಯಕ್ಷಗಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಮತ್ತು ಸಾರ್ವಜನಿಕ ಆಸ್ಪತ್ರೆ ಕುಂದಾಪುರ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕರಿಗೆ ಮಾರಕ ರೋಗ, ಏಡ್ಸ್ ಬಗ್ಗೆ ಅರಿವು ಮೂಡಿಸುವ ಬಗ್ಗೆ ಯಕ್ಷಗಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕುಂದಾಪುರ ತಾಲೂಕು ಪಂಚಾಯತ್ ವಠಾರದಲ್ಲಿ ನಡೆದ ಒಂದು ಗಂಟೆಯ ಈ ಯಕ್ಷಗಾನ ಕಾರ್ಯಕ್ರಮವನ್ನು ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ಪ್ರಾಯೋಜಿಸಿದ್ದು, ಯಕ್ಷಗಾನವನ್ನು ಬೆಂಗಳೂರಿನ ಕಲಾದರ್ಶಿನಿ ತಂಡ ನಡೆಸಿಕೊಟ್ಟರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ಅಧ್ಯಕ್ಷರಾದ ಕೆ. ನರಸಿಂಹ ಹೊಳ್ಳ ಅವರು ಈ ಪ್ರದರ್ಶನ ಸಾರ್ವಜನಿಕರಿಗೆ ಮಾರಕ ಕಾಯಿಲೆ ಏಡ್ಸ್ ಬಗ್ಗೆ ಅರಿವು ಮೂಡಿಸುವಲ್ಲಿ ತುಂಬಾ ಸಹಕಾರಿಯಾಗಿದೆ ಎಂದು ಕಲಾವಿದರಿಗೆ ಶುಭ ಹಾರೈಸಿದರು. ರೋಟರಿ ಸನ್‌ರೈಸ್ ಸದಸ್ಯರಾದ ಕೆ.ಎಚ್. ಚಂದ್ರಶೇಖರ, ಪ್ರಕಾಶಚಂದ್ರ ಹೆಗ್ಡೆ, ಅಬುಶೇಖ್ ಸಾಹೇಬ್, ರಾಜಶೇಖರ ಹೆಗ್ಡೆ, ಟಿ.ಎಂ. ಚಂದ್ರಶೇಖರ, ನಾಗರಾಜ ನಾಕ್, ಶಿವಾನಂದ ಎಂ.ಪಿ., ಡುಂಡಿರಾಜ್, ನಾಗೇಶ್ ನಾವುಡ ಮತ್ತು ಸಾರ್ವಜನಿಕ ಆಸ್ಪತ್ರೆಯ ಮೇಲ್ವಿಚಾರಕರಾದ ಸದಾನಂದ ರವರು ಉಪಸ್ಥಿತರಿದ್ದರು. ಅಜಯ ಭಂಡಾರ್‌ಕಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Exit mobile version