Site icon Kundapra.com ಕುಂದಾಪ್ರ ಡಾಟ್ ಕಾಂ

ಮತದಾರ ಪಟ್ಟಿ ಪರಿಷ್ಕರಣೆ: ಎ. 12 ವಿಶೇಷ ಶಿಬಿರ

ಉಡುಪಿ: ಭಾರತ ಚುನಾವಣಾ ಆಯೋಗವು ಮತದಾರ ಪಟ್ಟಿಯ ಡೇಟಾಗೆ ಆಧಾರ ಸಂಖ್ಯೆಯನ್ನು ಸಂಯೋಜಿಸಿ ಮತದಾರ ಪಟ್ಟಿಯನ್ನು ಶುದ್ಧೀಕರಿಸಲು ಮಾ. 3ರಿಂದ ರಾಷ್ಟ್ರಾದ್ಯಂತ ಇಲೆಕ್ಟೊರಲ್‌ ರೊಲ್ಸ್‌ ಪ್ಯುರಿಫಿಕೇಶನ್‌ ಮತ್ತು ಆಥೆಂಟಿಕೇಶನ್‌ ಪ್ರೋಗ್ರಾಂ ಹಮ್ಮಿಕೊಂಡಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.

ಈ ಕುರಿತು ದೇಶಾದ್ಯಂತ ಎಲ್ಲ ಜಿಲ್ಲೆಗಳ ಎಲ್ಲಾ ಮತಗಟ್ಟೆಗಳಲ್ಲಿ ಎ. 12ರ ಬೆಳಗ್ಗೆ 10ರಿಂದ ಸಂಜೆ 5 ರವರೆಗೆ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ.

ಪ್ರತಿಯೊಬ್ಬ ಮತದಾರನು ಅವನ/ಳ ಹೆಸರು ಮತದಾರ ಪಟ್ಟಿಯಲ್ಲಿ ಸರಿಯಾಗಿ ನೋಂದಾವಣೆ ಆಗಿರುವುದನ್ನು ಪರಿಶೀಲಿಸುವುದಲ್ಲದೆ ತಪ್ಪುಗಳಾಗಿದಲ್ಲಿ ದಾಖಲೆಗಳೊಂದಿಗೆ ನಮೂನೆ 8ರಲ್ಲಿ ಅರ್ಜಿಯನ್ನು ಮತ್ತು ಡಬ್ಬಲ್‌ ಎಂಟ್ರಿಯಾಗಿದ್ದಲ್ಲಿ ಯಾವುದಾದರೂ ಒಂದನ್ನು ತೆಗೆದುಹಾಕಲು ನಮೂನೆ 7ರಲ್ಲಿ ಅರ್ಜಿಯನ್ನು ಬಿಎಲ್‌ಒರಿಂದ ಪಡೆದು ಅವರಿಗೆ ಸಲ್ಲಿಸಬಹುದಾಗಿದೆ.

ಜ. 5ರಂದು ಪ್ರಕಟಿಸಲಾದ ಮತದಾರ ಪಟ್ಟಿಯೊಂದಿಗೆ ಬಿಎಲ್‌ಒ ಅವರು ಮತಗಟ್ಟೆಯಲ್ಲಿ ಹಾಜರಿರುವರು. ಆಯಾ ಮತಗಟ್ಟೆಯ ಮತದಾರರಿಂದ ಬಿಎಲ್‌ಒ ಅವರು ಆಧಾರ್‌, ಎಪಿಕ್‌, ಮೊಬೈಲ್‌ ಸಂಖ್ಯೆ ಮತ್ತು ಇಮೇಲ್‌ ಐಡಿ ವಿವರಗಳನ್ನು ಪಡೆಯುವರು. ಆಧಾರ್‌, ಎಪಿಕ್‌, ಮೊಬೈಲ್‌ ಸಂಖ್ಯೆ ಮತ್ತು ಇಮೈಲ್‌ ಐಡಿ ವಿವರಗಳನ್ನು ಇಸಿಐ ವೆಬ್‌ಸೈಟ್‌ನ ನ್ಯಾಶನಲ್‌ ವೋಟರ್ ಸರ್ವಿಸ್‌ ಪೋರ್ಟಲ್‌ನಲ್ಲಿ (ಎನ್‌ವಿಎಸ್‌ಪಿ) ಅಪ್‌ಲೋಡ್‌ ಮಾಡುವ, ಎಸ್‌ಎಂಎಸ್‌ ಮಾಡುವ (51969ಕ್ಕೆ ಎಸ್‌ಎಂಎಸ್‌) ವಿವರಗಳನ್ನು ಮತದಾರರಿಗೆ ಎ. 12ರಂದು ಮತಗಟ್ಟೆಯಲ್ಲಿ ಮತಗಟ್ಟೆಯ ಬಿಎಲ್‌ಒ. ತಿಳಿಹೇಳುವರು.

Exit mobile version