Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಸ್ಟೆಲ್ಲಾ ಮಾರಿಸ್ ಶಾಲೆಯ ಸುವರ್ಣ ಮಹೋತ್ಸವ: ಸುವರ್ಣ ಕ್ರೀಡೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಕ್ರೀಡೆ ಎನ್ನುವದು ಸಮಾಜದ ವಿವಿಧ ಜನರ ನಡುವೆ ಶಾಂತಿ ಸಹಬಾಳ್ವೆ ಸಾಮರಸ್ಯ ಮನೋಭಾವನೆಯನ್ನು ಮೂಡಿಸುವಲ್ಲಿ ಸಹಕಾರಿ. ಅಂತಹ ಕ್ರೀಡೆಗಳಲ್ಲಿ ತೊಡಗಿಸಿಕೊಂಡಾಗ ಬಹುಮುಖಿ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ಕುಂದಾಪುರ ವಲಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ದತ್ತಾತ್ರೇಯ ನಾಯಕ್ ಅವರು ಅಭಿಪ್ರಾಯ ಪಟ್ಟರು. ಅವರು ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಗಂಗೊಳ್ಳಿ ಇದರ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸುವರ್ಣ ಕ್ರೀಡೋತ್ಸವ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಆಹ್ವಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ಹಮ್ಮಿಕೊಂಡಿದ್ದ ಕಬಡ್ಡಿ ಪಂದ್ಯಾಟದ ಕ್ರೀಡಾಂಗಣವನ್ನು ಉದ್ಘಾಟಿಸಿದ ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ರಾಜು ದೇವಾಡಿಗ ಮಾತನಾಡಿ ಕ್ರೀಡಾಳುಗಳು ಯಾವತ್ತೂ ಕ್ರೀಡಾ ಸ್ಫೂರ್ತಿಯನ್ನು ಮೆರೆಯಬೇಕು. ಸೋಲು ಗೆಲುವಿಗಿಂತ ಪ್ರಮಾಣಿಕ ಪರಿಶ್ರಮ ಮುಖ್ಯ ಎಂದು ಹೇಳಿದರು.

ಸ್ಟೆಲ್ಲಾ ಮಾರಿಸ್ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ‍್ಯದರ್ಶಿ ಸಿಸ್ಟರ್ ಜ್ಯೂಲಿ ಆನ್ ಅದ್ಯಕ್ಷತೆ ವಹಿಸಿದ್ದರು.ಬೈಂದೂರು ಉಪವಲಯ ಅರಣ್ಯಾಧಿಕಾರಿ ಕೆ ಸದಾಶಿವ, ಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಪ್ಲೋಸಿ ಕೋಸ್ತ, ಸ್ಟೆಲ್ಲಾ ಮಾರಿಸ್ ಪ್ರೌಢ ಶಾಲೆಯ ಮುಖ್ಯೋಪಧ್ಯಾಯಿನಿ ಸಿಸ್ಟರ್ ವೈಲೆಟ್ ತಾವ್ರೋ ,ಸುವರ್ಣ ಮಹೋತ್ಸವ ಸಮಿತಿಯ ಪ್ರಧಾನ ಕಾರ‍್ಯದರ್ಶಿ ದಿವಾಕರ ಖಾರ್ವಿ ,ಕ್ರೀಡಾ ಸಮಿತಿಯ ಅಧ್ಯಕ್ಷ ಕಿರಣ್ ಶೆಟ್ಟಿ , ದೈಹಿಕ ಶಿಕ್ಷಣ ಶಿಕ್ಷಕ ಎಡ್ವಿನ್ ಮೆಂಡೋನ್ಸಾ ಉಪಸ್ಥಿತರಿದ್ದರು. ಶಿಕ್ಷಕಿ ರೆನಿಟಾ ಕ್ರಾಸ್ತಾ ಸ್ವಾಗತಿಸಿದರು. ಹಳೇ ವಿದ್ಯಾರ್ಥಿ ಅಬ್ದುಲ್ ಸಲಾಮ್ ಪ್ರಾಸ್ತಾವಿಸಿದರು.ಶಿಕ್ಷಕಿ ರೆನಿಟಾ ಬಾರ್ನೆಸ್ ಕಾರ‍್ಯಕ್ರಮ ನಿರೂಪಿಸಿದರು. ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ರೇಷ್ಮಾ ಶೇರುಗಾರ್ ವಂದಿಸಿದರು. ಶಿಕ್ಷಕಿ ಫೆಲ್ಸಿಯಾನಾ ಡಿಸೋಜ ನಿರ್ವಹಿಸಿದರು.

ಕ್ರೀಡೋತ್ಸವ ಸಮಾರೋಪ
ಎಲ್ಲರೂ ಏಕಮನಸ್ಸಿನಿಂದ ಒಂದಾಗಿ ಪರಿಶ್ರಮವನ್ನು ಹಾಕಿ ಕೆಲಸ ಮಾಡಿದಾಗ ಅಂದುಕೊಂಡ ಗುರಿಯನ್ನು ತಲುಪುವುದು ಸುಲಭ. ಹಳೇ ವಿದ್ಯಾರ್ಥಿಗಳು ಯಾವುದೇ ಶಿಕ್ಷಣ ಸಂಸ್ಥೆಯ ಬಹುಮೂಲ್ಯ ಆಸ್ತಿ ಎಂದು ಸ್ಟೆಲ್ಲಾ ಮಾರಿಸ್ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ‍್ಯದರ್ಶಿ ಸಿಸ್ಟರ್ ಜ್ಯೂಲಿ ಆನ್ ಅಭಿಪ್ರಾಯ ಪಟ್ಟರು. ಅವರು ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಗಂಗೊಳ್ಳಿ ಇದರ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸುವರ್ಣ ಕ್ರೀಡೋತ್ಸವದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿ ಸ್ಥಾನದಿಂದ ಶಾಲೆಯ ಹಳೆ ವಿದ್ಯಾರ್ಥಿ ಅಬ್ದುಲ್ ಸಲಾಮ್ ಮಾತನಾಡಿ ತಾವು ಕಲಿತ ಶಾಲೆಗೆ ನಮ್ಮಿಂದಾದ ಸಹಾಯ ಮಾಡುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯ .ಅದನ್ನು ನಿರ್ವಹಿಸುವುದರಲ್ಲಿ ಜೀವನದ ಆನಂದ ಅಡಗಿದೆ ಎಂದು ಹೇಳಿದರು.

ಸ್ಟೆಲ್ಲಾ ಮಾರಿಸ್ ಪ್ರೌಢ ಶಾಲೆಯ ಮುಖ್ಯೋಪಧ್ಯಾಯಿನಿ ಸಿಸ್ಟರ್ ವೈಲೆಟ್ ತಾವ್ರೋ ,ಸುವರ್ಣ ಮಹೋತ್ಸವ ಸಮಿತಿಯ ಪ್ರಧಾನ ಕಾರ‍್ಯದರ್ಶಿ ದಿವಾಕರ ಖಾರ್ವಿ , ,ಕ್ರೀಡಾ ಸಮಿತಿಯ ಅಧ್ಯಕ್ಷ ಕಿರಣ್ ಶೆಟ್ಟಿ , ದೈಹಿಕ ಶಿಕ್ಷಣ ಶಿಕ್ಷಕ ಎಡ್ವಿನ್ ಮೆಂಡೋನ್ಸಾ ಉಪಸ್ಥಿತರಿದ್ದರು. ಜಹೀರ್ ಸ್ವಾಗತಿಸಿದರು. ನರೇಂದ್ರ ಎಸ್ ಗಂಗೊಳ್ಳಿ ಕಾರ‍್ಯಕ್ರಮ ನಿರೂಪಿಸಿದರು. ಶಾಲೆಟ್ ಲೋಬೋ ವಂದಿಸಿದರು.

Exit mobile version