Kundapra.com ಕುಂದಾಪ್ರ ಡಾಟ್ ಕಾಂ

ಮನೆಯಿಂದಲೇ ಕನ್ನಡ ಕಡ್ಡಾಯವಾಗಲಿ: ಎಎಸ್ಎನ್ ಹೆಬ್ಬಾರ್

ಅಜೆಕಾರು: ಮನೆಯಲ್ಲಿ ತಂದೆ ತಾಯಿಗಳು ಮೊದಲು ಮಕ್ಕಳಿಗೆ ಕಡ್ಡಾಯ ಕನ್ನಡ ಕಲಿಸುವ ಕೆಲಸ ಮಾಡಿದಾಗ ಕನ್ನಡ ಉಳಿಯಲು ಸಾಧ್ಯ ಕನ್ನಡದಷ್ಟು ಅದ್ಬುತ ಭಾಷೆ ಬೇರೊಂದಿಲ್ಲ ಎಂದು ಅಖೀಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಸಾಹಿತಿ ಕುಂದಾಪುರದ ಎ.ಎಸ್‌.ಎನ್‌. ಹೆಬ್ಟಾರ್‌ ಹೇಳಿದರು.

ಅವರು ಕಾರ್ಕಳ ತಾಲೂಕಿನ ಎಣ್ಣೆಹೊಳೆ ಹಂಚಿಕಟ್ಟೆ ಮಹಾಮ್ಮಾಯಿ ದೇವಸ್ಥಾನದ ವಠಾರದಲ್ಲಿ ಡಾ| ಯು.ಕೃಷ್ಣ ಮುನಿಯಾಲ್‌ ದ್ವಾರದ ಯಶವಂತ ಚಿತ್ತಾಲ ವೇದಿಕೆಯಲ್ಲಿ ಶ್ರೀ ವಿದ್ಯಾಲಯ ಅರ್ಪಿಸಿದ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಕ.ಸಾ.ಪ. ಉಡುಪಿ ಜಿಲ್ಲೆ ಮತ್ತು ಸರ್ವರ ಸಹಕಾರದಲ್ಲಿ ಶೇಖರ ಅಜೆಕಾರು ಪರಿಕಲ್ಪನೆಯಲ್ಲಿ ಎ. 4ರಂದು ರಾತ್ರಿ ನಡೆದ 6ನೇ ಅಖೀಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೌರವ ಸ್ವೀಕರಿಸಿ ಮಾತನಾಡಿದರು.

ಗಣ್ಯರಿಗೆ ಗೌರವ ಪ್ರಶಸ್ತಿ ಪ್ರದಾನ ಮಾಡಿದರು. ವಾಯಲೆಟ್‌ ಪಿರೇರಾ, ಡಾ| ಲಕ್ಷ್ಮೀದೇವಿ,ಅಜೀಜ್‌ ಬೈಕಂಪಾಡಿ, ಶಾಲಿನಿ ಆತ್ಮಭೂಷಣ್‌, ದೇವದಾಸ ಈಶ್ವರ ಮಂಗಲ, ರತಿ ಆರ್‌. ಶೆಟ್ಟಿ ಅವರಿಗೆ ಸೇವಾ ರತ್ನ ಗೌರವ ಮತ್ತು ಡಾ| ಮಹಾಬಲೇಶ್ವರ ರಾವ್‌, ಸುಕನ್ಯಾ ಕಳಸ ದಂಪತಿಗೆ ಕರ್ನಾಟಕ ದಂಪತಿ ರತ್ನ ಗೌರವ, ನಾಡಿನ ವಿವಿಧ ಸಂಘ ಸಂಸ್ಥೆಗಳಿಗೆ ಕರ್ನಾಟಕ ಸಂಘ ರತ್ನ ಗೌರವ ಮತ್ತು ಅಜೆಕಾರು ಠಾಣಾಧಿಕಾರಿ ಡಿ.ಎನ್‌.ಕುಮಾರ್‌ ಸೇರಿದಂತೆ ಹಲವರನ್ನು ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಗೌರವಿಸಿದರು.

ಸಾಹಿತಿ ಸಾವಿತ್ರಿ ಮನೋಹರ್‌ ಅಧ್ಯಕ್ಷತೆಯಲ್ಲಿ ಮಹಿಳಾ ಗೋಷ್ಠಿ ನಡೆಯಿತು. ಪ್ರೊ| ನಾರಾಯಣ ಶೇಡಿಕಜೆ, ಪ್ರೊ| ವನಿತಾ ಶೆಟ್ಟಿ ಮತ್ತು ಪ್ರೇಮಾನಂದ ನಾಯಕ್‌ ವಿಚಾರ ಮಂಡನೆ ಮಾಡಿದರು.ಸಾಧಕ ಪುರಸ್ಕೃತರ ಮಾತಿನಮಂಟಪ, ಕರಾವಳಿಯ ಹಿರಿಕಿರಿಯ ಕವಿಗಳ ಬಹು ಭಾಷಾ ಕವಿಗೋಷ್ಠಿಯು ಕವಯಿತ್ರಿ ಜ್ಯೋತಿಗುರುಪ್ರಸಾದ್‌ ಅಧ್ಯಕ್ಷತೆಯಲ್ಲಿ ನಡೆದಿದ್ದು, ಕರಾವಳಿಯ ಹಲವಾರು ಕವಿಗಳು ಭಾಗವಹಿಸಿದ್ದರು. ನಡು ರಾತ್ರಿ ನಡೆದ ಸಾಹಿತ್ಯ ಮಂಥನದ ಡಾ| ಗಣನಾಥ ಎಕ್ಕಾರು, ಎಣ್ಣೆಹೊಳೆ ಸಂದೀಪ್‌ ಶೆಟ್ಟಿ, ರಹೀಂ ಎಣ್ಣೆಹೊಳೆ ಮೊದಲಾದವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ವಿಧಾನ ಪರಿ ಷತ್‌ ಸದಸ್ಯ ಕ್ಯಾ. ಗಣೇಶ್‌ ಕಾರ್ನಿಕ್‌, ಉದ್ಯಮಿ ಹೆಬ್ರಿ ಭಾಸ್ಕರ ಜೋಯಿಸ್‌, ಅಂತಾರಾಷ್ಟ್ರೀಯ ಛಾಯಾಚಿತ್ರಕಾರ ಅಜೆಕಾರು ಲಕ್ಷ್ಮೀಶ ಶೆಟ್ಟಿ, ಮೂಡಬಿದಿರೆ ಮಹಮ್ಮದ್‌ ಆಲಿ ಅಬ್ಟಾಸ್‌, ಕುಂದಾಪುರದ ಡಾ| ನರಸಿಂಹ ಮೂರ್ತಿ, ಡಾ| ನಿಕೇತನಾ, ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಭುವನಾಭಿರಾಮ ಉಡುಪ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಶೇಖರ ಅಜೆಕಾರು, ಗೌರವಾಧ್ಯಕ್ಷ ಡಾ| ಸಂತೋಷ ಕುಮಾರ್‌ ಶೆಟ್ಟಿ,ಅರುಣ್‌ ಭಟ್‌, ಕಾರ್ಯದರ್ಶಿ ಸುಕುಮಾರ್‌ ಮುನಿಯಾಲ್‌, ಕುರ್ಪಾಡಿ ಗಿರಿಜಾ ಶಂಕರಾಚಾರ್ಯ ಉಪಸ್ಥಿತರಿದ್ದರು.

Exit mobile version