ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೇಂದ್ರ ಸರ್ಕಾರ ೫೦೦ ಮತ್ತು ೧೦೦೦ ಮುಖಬೆಲೆಯ ನೋಟನ್ನು ರದ್ದು ಪಡಿಸಿದ್ದರ ಪರಿಣಾಮ ದೇಶದ ಬಡವರು ಬ್ಯಾಂಕಿನ ಎದುರಿನಲ್ಲಿ ನಿಲ್ಲುವ ಹಾಗೇ ಮಾಡಿದ್ದಾರೆ. ಕಾಳಧನಿಕನನ್ನು ಬಲೆಗೆ ಬೀಳಿಸುವ ನೆಪವೊಡ್ಡಿ ಬಡವರನ್ನು ಸರಕಾರ ಬ್ಯಾಂಕಿಗೆ ಅಲೆದಾಡಿಸುತ್ತಿದೆಯೇ ಹೊರತು ಶ್ರೀಮಂತರಿಗೆ ಏನೂ ತೊಂದರೆಯಾಗಿಲ್ಲ ಎಂದು ಬೈಂದೂರು ಬ್ಲಾಕ್ ಯುತ್ ಕಾಂಗ್ರೆಸ್ ಅಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ ಹೇಳಿದರು.
ಅವರು ಬೈಂದೂರು ಬ್ಲಾಕ್ ಯೂತ್ ಕಾಂಗ್ರೆಸ್ ವತಿಯಿಂದ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯನ್ನು ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಬಳಿಕ ಮಾತನಾಡಿದರು. ಈ ದೇಶದ ಕೋಟ್ಯಾಂತರ ಜನರು ಬ್ಯಾಂಕ್ ಖಾತೆಯನ್ನು ಹೊಂದಿರದ ಮುಗ್ದ ಜನರು, ಬಡ ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು ವಿಶೇಷವಾಗಿ ಮನೆಯ ಮುಂಜಾಗ್ರತೆಗೆ ಹಣವನ್ನು ತೆಗೆದಿಟ್ಟು ಮಹಿಳೆಯರು ಕಳೆದ ಎರಡು ತಿಂಗಳಿನಿಂದ ಬಹಳ ಕಷ್ಟವನ್ನು ಪಡುತ್ತಿದ್ದಾರೆ. ಇದ್ದರಿಂದ ದೇಶದ ಯಾವುದೇ ಶ್ರೀಮಂತರಿಗೂ ತೊಂದರಿಯಾಗುತ್ತಿಲ್ಲ. ದೇಶದಲ್ಲಿ ೧೦೦ಕ್ಕೂ ಮಿಕ್ಕಿ ಜನರು ಮೃತ ಪಟ್ಟಿದ್ದಾರೆ. ಕೇಂದ್ರ ಸರಕಾರದ ಈ ನಿರ್ಧಾರ ಖಂಡನಾರ್ಹ ಎಂದರು.
ಬೈಂದೂರು ವಿಶೇಷ ತಹಶೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಯೂತ್ ಕಾಂಗ್ರೆಸ್ ಮುಖಂಡರಗಳಾದ ಶೇಖರ ಪೂಜಾರಿ ಉಪ್ಪುಂದ, ಗಣೇಶ ಪೂಜಾರಿ ಯೋಜನಾನಗರ, ಮಾಣಿಕ್ಯ ಹೋಬಳಿದಾರ್, ಸುನಿಲ್ ಉಪ್ಪುಂದ, ಕಿರಣ್ ಗಾಣಿಗ, ನಾಗರಾಜ್ ನಾವುಂದ, ರಿಯಾಜ್ ಗಂಗೊಳ್ಳಿ, ಸತೀಶ್ ದೇವಾಡಿಗ ತ್ರಾಸಿ, ಪ್ರಕಾಶ್ ಕಾಲ್ತೋಡು, ಸುರೇಶ್ ದೇವಾಡಿಗ ಬೆಸ್ಕೂರು, ಸನತ್ ಬಳೆಗಾರ್ ಕೊಲ್ಲೂರು, ಮೊದಲಾದವರು ಭಾಗವಹಿಸಿದ್ದರು.