Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ದೇವಾಲಯಗಳ ಸ್ವಚ್ಛತೆ ಆಂದೋಲನಕ್ಕೆ ಡಾ. ವಿರೇಂದ್ರ ಹೆಗ್ಗಡೆ ಅವರಿಂದ ಚಾಲನೆ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಎಲ್ಲಾ ದೇವಾಲಯಗಳಲ್ಲೂ ಸ್ವಚ್ಛತೆ ಆಂದೋಲನ ಮೂಲಕ ದೇವಸ್ಥಾನ ಪರಿಸರ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆ ಸಮಕ್ಷಮದಲ್ಲಿ ಮಣೂರಿನಲ್ಲಿ ನಡೆದ ಅಭಿಯಾನದ ನಂತರ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಡಾ.ವೀರೇಂದ್ರ ಹೆಗ್ಗಡೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.

ದೇವಸ್ಥಾನ ಅರ್ಚಕ ರವಿರಾಜ್ ಉಪಾಧ್ಯಾಯ ಪೂಜೆ ನೆರವೇರಿಸಿ, ಡಾ.ವೀರೇಂದ್ರ ಹೆಗ್ಗಡೆ ಅವರಿಗೆ ಪ್ರಸಾದ ವಿತರಣೆ ಮಾಡಿದರು.

ಗೋಪಾಡಿ ಶ್ರೀ ಚಿಕ್ಕಮ್ಮ ದೇವಸ್ಥಾನ ವಠಾರದಲ್ಲಿ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ, ದೇವಸ್ಥಾನ ಪರಿಸರ ಸ್ವಚ್ಛವಾಗಿಡುವಂತೆ ಕರೆಕೊಟ್ಟ ಅವರು ಮಡಿ ಮಾಡುವುದರಿಂದ ಶುದ್ಧೀಕರಣ ಆಗೋದಿಲ್ಲ. ದೇಶದಲ್ಲೆಲ್ಲಾ ಸ್ಚಚ್ಛತಾ ಅಂದೋಲನ ನಡೆಯುತ್ತಿದ್ದು, ದೇವಸ್ಥಾನ ಪರಿಸರ ಸ್ವಚ್ಛವಾಗಿಡಬೇಕು. ಮನಸ್ಸು ಪ್ರಕೃತಿ, ಪರಿಸರ ಸ್ವಚ್ಛವಾಗಡುವ ಮೂಲಕ ದೇವಸ್ಥಾನ ಪರಿಸರಗಳ ಸ್ವಚ್ಛತೆಗೆ ಹೊಸ ಅರ್ಥಕೊಡಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಗೋಪಾಡಿ ಗ್ರಾಪಂ ಅಧ್ಯಕ್ಷೆ ಸರಸ್ವತಿ ಜಿ.ಪುತ್ರನ್, ಜಿಪಂ ಸದಸ್ಯೆ ಶ್ರೀಲತಾ ಶೆಟ್ಟಿ ಪ್ರತಿ ತಿಂಗಳಿಗೊಮ್ಮೆ ಗ್ರಾಪಂ ಸ್ಚಚ್ಛತಾ ಅಭಿಯಾನ ಹಾಗೂ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಒಕ್ಕೂಟ ಸದಸ್ಯರು ಪಾಲ್ಗೊಳ್ಳುವಂತೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಅನುವಂಶೀಯ ಮೊಕ್ತೇಸರ ಸೂರ್ಯನಾರಾಯಣ ಉಪಾಧ್ಯಾಯ, ಬಸ್ರೂರು ಮಹತೋಬಾರ ಶ್ರಿ ಮಹಾಲಿಂಗೇಶ್ವರ ದೇವಸ್ಥಾನ ಅಡಳಿತ ಮೊತೇಸರ ಬಿ.ಅಪ್ಪಣ್ಣ ಹೆಗ್ಡೆ, ವಾಸ್ತು ತಜ್ಞ ಬಸವರಾಜ್ ಶೆಟ್ಟಿಗಾರ್, ಗ್ರಾಪಂಮ ಸದಸ್ಯರಯ ಹಾಗೂ ಪ್ರಮುಖರ ಇದ್ದರು.

Exit mobile version