ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಿರಿಯರು ಆಚರಿಸಿಕೊಂಡು ಬಂದ ಸಂಸ್ಕೃತಿಯನ್ನು ಉಳಿಸಿ ಬೆಳುಸುವುದು ನಮ್ಮೆಲ್ಲರ ಕರ್ತವ್ಯ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ನಮ್ಮನ್ನು ತೊಡಗಿಸಿಕೊಂಡಾಗ ಪರಸ್ಪರ ಭಾಂದವ್ಯ ಹೆಚ್ಚಾಗುತ್ತದೆ ಎಂದು ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ಅಧ್ಯಕ್ಷ ಶ್ರೀನಿವಾಸ ಗಾಣಿಗ ಹೇಳಿದರು.
ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ಆಶ್ರಯದಲ್ಲಿ ಶ್ರೀ ಲಕ್ಷ್ಮೀಂದ್ರ ತೀರ್ಥ ಶ್ರೀಪಾದಗಳ ಆಶೀರ್ವಾದದೊಂದಿಗೆ ಶ್ರೀ ವ್ಯಾಸರಾಜ ಮಠ ಕುಂದಾಪುರ ಇದರ ಶ್ರೀ ಹಯಗ್ರೀವ ತೀರ್ಥ ಶ್ರೀಪಾದರು ಮತ್ತು ಶ್ರೀ ರಾಮಚಂದ್ರ ತೀರ್ಥ ಶ್ರೀಪಾದರ ವೃಂದಾವನ ಜೀರ್ಣೋದ್ಧಾರ ಶಿಲಾನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಮೂರ್ತಿ ವಿಜಯ ಪೆಜತ್ತಾಯ ಧಾರ್ಮಿಕ ವಿಧಿ ಕೈಂಕರ್ಯ ನೇರವೆರಿಸಿದರು. ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ಮುಖ್ಯಸ್ಥರಾದ ರಾಮಲಕ್ಷ್ಮಣ, ಉದ್ಯಮಿಗಳಾದ ಸುಧೀರ್ ಪಂಡಿತ್, ಜಿ.ಆರ್ ಚಂದ್ರಯ್ಯ, ಜಿ.ಬಿ. ಪರಮೇಶ್ವರ, ನಾರಾಯಣ ಮಾಸ್ಟರ್, ಗೋಪಾಲ ಚಲ್ಲೆಮಕ್ಕಿ, ಶ್ರೀನಿವಾಸ ಗಾಣಿಗ ಬಡಾಕೆರೆ, ಪಾಂಡುರಂಗ ಗಾಣಿಗ ಹಾಲಾಡಿ, ಕೆ. ರಮಾನಂದ ಉಪಸ್ಥಿತರಿದ್ದರು. ಕೋಶಾಧಿಕಾರಿ ಶಂಕರನಾರಯಣ ಗಾಣಿಗ ಸ್ವಾಗತಿಸಿದರು. ಜಿ. ಶಿವಾನಂದ ರಾವ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.