Kundapra.com ಕುಂದಾಪ್ರ ಡಾಟ್ ಕಾಂ

ಯುವಜನರಿಗೆ ಅರಿವು ಮೂಡಿಸಿ ಅಪರಾಧ ತಡೆ ಸಾಧ್ಯ: ವೃತ್ತನಿರೀಕ್ಷಕ ರಾಘವ ಪಡೀಲ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಪೊಲೀಸ್ ಇಲಾಖೆಯಿಂದ ಕಾನೂನು ಮಾಹಿತಿ ಬೈಂದೂರು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ ಬೈಂದೂರು ರೋಟರಿ ಸಮುದಾಯ ಭವನದಲ್ಲಿ ಜರುಗಿತು.

ವೃತ್ತನಿರೀಕ್ಷಕ ರಾಘವ ಪಡೀಲ್ ಮಾತನಾಡಿ ಕಾನೂನುಬಾಹಿರ ಚಟುವಟಿಕೆಗಳಿಂದ ಸಮಾಜದ ಮೇಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಯವಜನತೆಗೆ ಸರಿಯಾದ ಮಾಹಿತಿ, ಕಾರ್ಯಾಗಾರಗಳ ಮೂಲಕ ಅರಿವು ಮೂಡಿಸುವುದರಿಂದ ಸುಧಾರಣೆ ತರಬಹುದು ಎಂದು ಹೇಳಿದರು.

ದ್ವಿಚಕ್ರ ಸವಾರಿ ಮಾಡುವಾಗ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಲೇಬೇಕು. ಇಲ್ಲವಾದರೆ ದಂಡದ ಜೊತೆಗೆ ಶಿಕ್ಷೆಯನ್ನೂ ಅನುಭವಿಸಬೇಕಾಗುತ್ತದೆ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಯಿಂದಾಗಿ ಬೈಂದೂರು ವ್ಯಾಪ್ತಿಯಲ್ಲಿ ಅಪಘಾತಗಳ ಸಂಖ್ಯೆ ದ್ವಿಗುಣಗೊಳ್ಳುತ್ತದೆ, ಈ ನೆಲೆಯಲ್ಲಿ ವಿದ್ಯಾರ್ಥಿಗಳು ರಸ್ತೆ ದಾಟುವಾಗ ಪರಸ್ಪರ ಮಾತನಾಡುತ್ತಾ ಸಾಗುವುದು, ಮೊಬೈಲ್ ಫೋನ್ ಬಳಕೆ ಮಾಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ತಪ್ಪು ಯಾರೇ ಮಾಡಿದರೂ ತಪ್ಪೆ. ವಿದ್ಯಾರ್ಥಿಗಳು ಎನ್ನುವ ಕಾರಣಕ್ಕೆ ಬಿಟ್ಟುಬಿಡಲಾಗುವುದಿಲ್ಲ. ಹಾಗಾಗಿ ಸಂಚಾರದ ಸಮಯದಲ್ಲಿ ಜಾಗೃತೆವಹಿಸಿ ಎಂದ ಅವರು, ಈಗಿನ ಸ್ಥಿತಿಯಲ್ಲಿ ತಿಳಿಯದೇ ತಪ್ಪು ಮಾಡಿದೆ ಎಂದರೂ ಕಾನೂನು ಬಿಡುವುದಿಲ್ಲ. ಯಾವುದೇ ರೀತಿಯ ತಪ್ಪಿಗೆ ಶಿಕ್ಷೆ ತಪ್ಪಿದ್ದಲ್ಲ ಎಂದ ಅವರು ಸಮಸ್ಯೆಗಳಿದ್ದರೆ ನಮಗೂ ತಿಳಿಸಿ. ಮಾನವೀಯತೆ ದೃಷ್ಠಿಯಿಂದ ಬಗೆಹರಿಸುವ ಪ್ರಯತ್ನದ ಜತೆಗೆ ಸಹಕಾರ ನೀಡುತ್ತೇವೆ ಎಚಿದು ತಿಳಿಹೇಳಿದರು.

ಈ ಸಂದರ್ಭ ವಿದ್ಯಾರ್ಥಿಗಳು ಕೇಳಿದ ಸುಮಾರು ನೂರಕ್ಕೂ ಹೆಚ್ಚು ಪ್ರಶ್ನೆಗಳಗೆ ವೃತ್ತ ನಿರೀಕ್ಷಕರು ನೇರವಾಗಿ ಉತ್ತರಿಸಿದರು. ಸುಮಾರು ಐನೂರಕ್ಕು ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಠಾಣಾಧಿಕಾರಿ ಸಂತೋಷ್ ಆನಂದ್ ಕಾಯ್ಕಿಣಿ, ಕಾಲೇಜು ಪ್ರಾಂಶುಪಾಲ ಪಾಲಾಕ್ಷ ಟಿ. ಉಪಸ್ಥಿತರಿದ್ದರು.

Exit mobile version