Kundapra.com ಕುಂದಾಪ್ರ ಡಾಟ್ ಕಾಂ

ಶಿಕ್ಷಣದಲ್ಲಿ ಅಂಕಗಳ ದೃಷ್ಟಿ, ಭಾವಗಳ ವೃಷ್ಟಿ ಹಾಗೂ ಬದುಕಿನ ದೃಷ್ಟಿಗಳ ಸಂಗಮವಾಗಬೇಕು: ಆರ್. ಬಿ. ನಾಯಕ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉತ್ತಮ ಭವಿಷ್ಯವನ್ನು ಹೊಂದಲು ವಾರ್ಷಿಕ ಪರೀಕ್ಷೆಗಳಲ್ಲಿ ಅಂಕಗಳಿಸುವುದಷ್ಟೇ ಮುಖ್ಯವಲ್ಲ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹ ತಯಾರಾಗಬೇಕು.ಂ iiವುದೇ ಕ್ಷೇತ್ರದಲ್ಲಿ ಉತ್ತಮ ಆಡಳಿತಗಾರರಾಗಿ ರೂಪುಗೊಳ್ಳಲು ಸಕಲ ಸಿದ್ಧತೆಗಳನ್ನು ಎಳೆಯ ವಯಸ್ಸಿನಿಂದಲೇ ಮಾಡಿಕೊಳ್ಳಬೇಕು ಎಂದು ಉಡುಪಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಆರ್.ಬಿ. ನಾಯಕ್ ತಿಳಿಸಿದರು.

ಕುಂದಾಪುರ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜು ಕುಂದಾಪುರದ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ನಿವೃತ್ತ ಪ್ರಾಂಶುಪಾಲೆ ಚಂದ್ರಪ್ರಭಾ ಆರ್. ಹೆಗ್ಡೆ ಮಾತನಾಡುತ್ತಾ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಅಂಕ ಗಳಿಸಲು ಏಕಾಗ್ರತೆ ಅತೀ ಅಗತ್ಯ ಉತ್ತಮ ವಾತಾವರಣದಲ್ಲಿ ಕಲಿಯುವ ಎಲ್ಲ ವಿದ್ಯಾರ್ಥಿಗಳು ನಾಳಿನ ಸತ್ಪ್ರಜೆಗಳಾಗುತ್ತಾರೆ ಅಂತಹ ವಾತಾವರಣವನ್ನು ಕುಂದಾಪುರದ ವೆಂಕಟರಮಣ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಸೃಷ್ಟಿಸಿದೆ ಇದರ ಸಂಪೂರ್ಣ ಪ್ರಯೋಜನವನ್ನು ವಿದ್ಯಾರ್ಥಿಗಳು, ಪೋಷಕರು ಪಡೆಯಬೇಕು ಎಂದು ತಿಳಿಸಿದರು.
ಶ್ರೀ ವೆಂಕಟರಮಣ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನ ಅಧ್ಯಕ್ಷ ಕೆ.ಮೋಹನ್ ಕಾಮತ್ ಅಧ್ಯಕ್ಷತೆ ವಹಿಸಿ, ಪ್ರಶಸ್ತಿಯನ್ನು ಗಳಿಸಿದ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಟ್ರಸ್ಟಿನ ಕಾರ್ಯದರ್ಶಿ, ವಿದ್ಯಾಸಂಸ್ಥೆಗಳ ಚಾಲನಾ ಶಕ್ತಿ ಕೆ. ರಾಧಾಕೃಷ್ಣ ಶೆಣೈ, ಟ್ರಸ್ಟಿನ ಖಜಾಂಚಿ ಲಕ್ಷ್ಮಿನಾರಾಯಣ ಶೆಣೈ, ಹೈಸ್ಕೂಲಿನ ಪ್ರಾಂಶುಪಾಲೆ ರೂಪಾ ಶೆಣೈ, ಪ್ರಾಥಮಿಕ ಶಾಲೆಯ ಮುಖ್ಯಸ್ಥೆ ಜಯಶೀಲಾ ನಾಯಕ್ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲರಾದ ನಾಗೇಶ ಶಾನುಭಾಗ್ ಕಳೆದ ಸಾಲಿನ ವರದಿಯನ್ನು ವಾಚಿಸಿದರು. ಕಾಲೇಜು ವಿದ್ಯಾರ್ಥಿನಿ ಪೃಥ್ವಿ ಪೈ ಕಾರ್ಯಕ್ರಮವನ್ನು ನಿರ್ವಹಿಸಿದರು.

Exit mobile version