Kundapra.com ಕುಂದಾಪ್ರ ಡಾಟ್ ಕಾಂ

ಜಿ.ಎಸ್‌.ಬಿ.ಮಂಡಲ ಡೊಂಬಿವಲಿ : ರಾಮ ನವಮಿ ಆಚರಣೆ

ಮುಂಬಯಿ: ಜಿ. ಎಸ್‌. ಬಿ. ಮಂಡಲ ಡೊಂಬಿವಲಿ ಇದರ ವಾರ್ಷಿಕ ಶ್ರೀ ರಾಮ ನವಮಿ ಉತ್ಸವವು ಕಳೆದ ಮಂಗಳವಾರ ಸ್ಥಳೀಯ ಸ್ವಯಂವರ ಸಭಾಗೃಹದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ, ರಾಮನವಮಿ ಹವನ, ಪವಮಾನ ಅಭಿಷೇಕ, ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ನೇರವೇರಿತು.

News mumbai rama navami

ಸಂಜೆ ಭಕ್ತಾಧಿಗಳ ಸಹಯೋಗದೊಂದಿಗೆ ಶ್ರೀ ರಾಮ ದೇವರಿಗೆ 6 ಲಕ್ಷ ರೂ. ಗಳ ವೆಚ್ಚದಿಂದ ಸಂಪೂರ್ಣ ಸಾಗುವಾಗಿ ಮರದಿಂದ ನಿರ್ಮಿಸಲಾದ ರಾಮರಥದಲ್ಲಿ ಉತ್ಸವ ಮೂರ್ತಿಯನ್ನು ಇರಿಸಿ ರಥೋತ್ಸವ ನಡೆಸಲಾಯಿತು. ರಥವನ್ನು ಉತ್ತರ ಕನ್ನಡ ಕುಮಟಾದ ಮಹಾಲಸಾ ಹ್ಯಾಂಡಿಕೃಷ್ಟನ್‌ ಡಿ. ಡಿ. ಶೇನ್‌ ಅವರು ನಿರ್ಮಿಸಿದ್ದಾರೆ. 6 ಆಡಿ ಉದ್ದ, 5 ಆಡಿ ಅಗಲ ಮತ್ತು 12 ಅಡಿ ಎತ್ತರವಿರುವ ಈ ರಥವು ಊರಿನ ಸಂಸ್ಕೃತಿ, ಸಂಸ್ಕಾರಗಳನ್ನು ಬಿಂಬಿಸುತ್ತಿದೆ.

ರಥವನ್ನು ಡೊಂಬಿವಲಿಯ ಪ್ರಾಮುಖ ರಸ್ತೆಯಲ್ಲಿ ಎಳೆದು ನಂತರ ಜಿ. ಎಸ್‌. ಬಿ. ಮಂಡಲದ ಶಾಲೆಯ ಅಂಬಿಕಾನಗರ ಗೋಗಾ„ನ್‌ವಾಡಿಯಲ್ಲಿ ಮೆರವಣಿಗೆಯ ಮೂಲಕ ಸಾಗಿಸಲಾಯಿತು. ಕೊನೆಯಲ್ಲಿ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಸಾವಿರಾರು ಮಂದಿ ಸಮಾಜ ಬಾಂಧವರು, ಭಕ್ತಾದಿಗಳು ಪಾಲ್ಗೊಂಡಿದ್ದರು.

Exit mobile version