Kundapra.com ಕುಂದಾಪ್ರ ಡಾಟ್ ಕಾಂ

ಸ್ಟೆಲ್ಲಾ ಮಾರಿಸ್ ಸುವರ್ಣ ಮಹೋತ್ಸವ ಸಮಾರೋಪ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ವಿದ್ಯಾಸಂಸ್ಥೆಗಳು ವ್ಯಕ್ತಿಯ ಭವ್ಯ ಭವಿಷ್ಯದ ಬುನಾದಿ ಇದ್ದಂತೆ. ಅವುಗಳನ್ನು ಉಳಿಸಿ ಬೆಳೆಸುವುದು ಸಮಾಜದ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಶಾಲೆ ಎನ್ನುವುದು ಶಿಕ್ಷಣದ ಜೊತೆ ಉತ್ತಮ ಸಂಸ್ಕಾರಯುತವಾದ ಮೌಲ್ಯಗಳನ್ನು ಬೆಳೆಸಲು ಸಹಕಾರಿ ಎಂದು ಕುಂದಾಪುರ ವಲಯದ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅನಿಲ್ ಡಿಸೋಜ ಅಭಿಪ್ರಾಯ ಪಟ್ಟರು.

ಅವರು ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಗಂಗೊಳ್ಳಿ ಇದರ ಸುವರ್ಣ ಮಹೋತ್ಸವದ ಸನ್ಮಾನ ಮತ್ತು ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರಿನ ಅಪೋಸ್ತಲಿಕ್ ಕಾರ್ಮೆಲ್ ಶಿಕ್ಷಣ ಸಂಸ್ಥೆಯ ಕಾರ‍್ಯದರ್ಶಿ ಸಿಸ್ಟರ್ ಐಡಾ ಬರ್ಬೋಜ ಎ.ಸಿ ಮಾತನಾಡಿ ಶಾಲೆಯ ಅಭಿವೃದ್ಧಿಯಲ್ಲಿ ಅಲ್ಲಿ ಕಲಿತ ವಿದ್ಯಾರ್ಥಿಗಳು ನೆರವಾಗಬೇಕು. ಪರಸ್ಪರ ಕೊಡುಕೊಳ್ಳುವಿಕೆಯಲ್ಲಿ ಸಹಕಾರದಲ್ಲಿ ಜೀವನದ ಆನಂದ ಅಡಗಿದೆ ಎಂದು ಹೇಳಿದರು.

ಗಂಗೊಳ್ಳಿಯ ಚರ್ಚಿನ ಧರ್ಮಗುರು ಅಲ್ಬರ್ಟ್ ಕ್ರಾಸ್ತಾ, ಗಂಗೊಳ್ಳಿಯ ಪುರೋಹಿತರಾದ ಜಿ. ನಾರಾಯಣ ಆಚಾರ್ಯ, ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಖತೀಬರಾದ ಜನಾಬ್ ಅಬ್ದುಲ್ ವಹಾಬ್ ನದ್ವಿ, ಮಂಗಳೂರಿನ ಮೆಸ್ಕಾಂ ನಿರ್ದೇಶಕ ರಿಯಾಝ್ ಅಹಮದ್, ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಜಿ.ಟಿ ಮಂಜುನಾಥ ,ಜಾರ್ಜ ಡಿ ಅಲ್ಮೇಡಾ, ಆರ್ಚಿ ಮಿನೇಜಸ್ ಶುಭ ಹಾರೈಸಿದರು. ಉದ್ಯಮಿ ಜಿ ಮೊಹಮ್ಮದ್ ಮತ್ತು ಶಾಲೆಯ ಪ್ರಥಮ ವರುಷದ ವಿದ್ಯಾರ್ಥಿನಿ ನ್ಯಾನ್ಸಿ ವೆಲೇರಿಯನ್ ಮಿನೇಜಸ್ ಬಹುಮಾನ ವಿತರಿಸಿದರು.

ಇದೇ ಸಂದರ್ಭದಲ್ಲಿ ಹಾವು ಹಿಡಿಯುವ ಸಮಾಜ ಸೇವಕ ಗುರುರಾಜ್ ಗಂಗೊಳ್ಳಿ ಅವರನ್ನು ಮತ್ತು ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗು ಶಿಕ್ಷಕೇತರರನ್ನು ಸನ್ಮಾನಿಸಿ ಗೌರವಿಸಲಾಯಿತು

ಮೂಡುಬೆಳ್ಳೆ ಚರ್ಚಿನ ಧರ್ಮಗುರು ಅಲ್ಫೋನ್ಸಾ ಡಿಲೀಮಾ, ಸ್ಟೆಲ್ಲಾ ಮಾರಿಸ್ ಪ್ರೌಢ ಶಾಲೆಯ ಮುಖ್ಯೋಪಧ್ಯಾಯಿನಿ ಸಿಸ್ಟರ್ ವೈಲೆಟ್ ತಾವ್ರೋ ಉಪಸ್ಥಿತರಿದ್ದರು. ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ರಾಜು ದೇವಾಡಿಗ ಸ್ವಾಗತಿಸಿದರು. ಪ್ರಧಾನ ಕಾರ‍್ಯದರ್ಶಿ ದಿವಾಕರ ಖಾರ್ವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಪ್ರಕಾಶ್ ಪ್ರಾರ್ಥಿಸಿದರು. ಕಿರಣ್ ಶೆಟ್ಟಿ ಮತ್ತು ಝಹೀರ್ ಬಹುಮಾನಿತರ ಪಟ್ಟಿ ವಾಚಿಸಿದರು. ಉಪನ್ಯಾಸಕರಾದ ನರೇಂದ್ರ ಎಸ್ ಗಂಗೊಳ್ಳಿ ಮತ್ತು ಶಾಲೆಟ್ ಲೋಬೊ ಕಾರ‍್ಯಕ್ರಮ ನಿರೂಪಿಸಿದರು.. ಹಳೇ ವಿದ್ಯಾರ್ಥಿ ಅಬ್ದುಲ್ ಸಲಾಂ ವಂದಿಸಿದರು.

Exit mobile version