Site icon Kundapra.com ಕುಂದಾಪ್ರ ಡಾಟ್ ಕಾಂ

ಚಿತ್ತೂರು: ಮಹಿಳಾ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷರಾಗಿ ಅಶ್ವಿನಿ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಇತ್ತೀಚೆಗೆ ಮರಣಕಟ್ಟೆ ಬ್ರಹ್ಮ,ಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಚಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಿಳಾ ಗ್ರಾಮ ಸಮಿತಿ ಅಧ್ಯಕ್ಷರನ್ನಾಗಿ ಅಶ್ವಿನಿ ಶೆಟ್ಟಿ ಹಿಜಾಣ ಇವರನ್ನು ಬೈಂದೂರು ಬ್ಲಾಕ್ ಮಹಿಳಾ ಮೋರ್ಚಾ ಅಧ್ಯಕ್ಷರಾದ ಪ್ರಿಯದರ್ಶಿನಿ ಬಿಜೂರು ಇವರು ಆಯ್ಕೆ ಮಾಡಿರುತ್ತಾರೆ. ಕಾರ್ಯದರ್ಶಿಯನ್ನಾಗಿ ಶೋಭಾ ಶೆಟ್ಟಿ ನೈಕಂಬಳಿ, ಉಪಾಧ್ಯಕ್ಷರಾಗಿ ಸಂಗೀತಾ ಶೆಟ್ಟಿ, ಬೇಬಿ ಇವರನ್ನು ಆಯ್ಕೆ ಮಾಡಲಾಗಿದೆ.

ಸಭೆಯಲ್ಲಿ ಬಿಜೆಪಿ ಮುಖಂಡರಾದ ಡಾ. ಅತುಲ್‌ಕುಮಾರ್ ಶೆಟ್ಟಿ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ರಾಮಚಂದ್ರ ಮಂಜ, ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ ಮಡಿವಾಳ, ಬೈಂದೂರು ಬಿಜೆಪಿ ಘಟಕದ ಕಾರ್ಯದರ್ಶಿ ಶ್ರೀಮತಿ ಮಾಲತಿ ಬಿ. ನಾಯ್ಕ್, ಶ್ರೀಮತಿ ಜಯಂತಿ ಪೂಜಾರಿ, ಗ್ರಾ.ಪಂ. ಸದಸ್ಯರಾದ ಪ್ರದೀಪ್ ಹೆಗ್ಡೆ, ಶ್ರೀಮತಿ ಜ್ಯೋತಿ, ಶ್ರೀಮತಿ ಪದ್ದು ಉಪಸ್ಥಿತರಿದ್ದರು.

Exit mobile version