Site icon Kundapra.com ಕುಂದಾಪ್ರ ಡಾಟ್ ಕಾಂ

ಪುಣೆ: ವಿಶ್ವ ಬಂಟರ ದಿನಾಚರಣೆ ಹಾಗೂ ಬಿಸುಪರ್ಬ ಆಚರಣೆ

ಪುಣೆ: ಪುಣೆ ಬಂಟರ ಸಂಘದ ವತಿಯಿಂದ ವಿಶ್ವ ಬಂಟರ ದಿನಾಚರಣೆ ಹಾಗೂ ಬಿಸುಪರ್ಬ ಆಚರಣೆಯು ಎ. 14ರಂದು ಬಾಣೇರ್‌ನಲ್ಲಿರುವ ಸಂಘದ ನಿರ್ಮಾಣ ಹಂತದ ಭವನದ ಆವರಣದಲ್ಲಿ ಜರಗಿತು.

ಬೆಳಗ್ಗೆ ಭವನದ ಎದುರುಗಡೆ ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷ ಸಿ. ಎ. ಸದಾನಂದ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ವಿಶ್ವ ಬಂಟರ ಧ್ವಜವನ್ನು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆನಂತರ ಬಂಟರ ಗೀತೆಯನ್ನು ಹಾಡಲಾಯಿತು.

ಈ ಸಂದರ್ಭ ಸಂಘದ ಗೌರವಾಧ್ಯಕ್ಷ ಜಗನ್ನಾಥ ಬಿ. ಶೆಟ್ಟಿ ಓಣಿಮಜಲು, ಸಂಘದ ಮಾಜಿ ಅಧ್ಯಕ್ಷ ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆ, ಸಂಘದ ಅಧ್ಯಕ್ಷ ಇನ್ನ ಕುರ್ಕಿಲ… ಬೆಟ್ಟು ಸಂತೋಷ್‌ ಶೆಟ್ಟಿ , ಬಂಟ್ಸ್‌ ಅಸೋಸಿಯೇಶನ್‌ ಹವೇಲಿ ಅಧ್ಯಕ್ಷ ಮಿಯ್ನಾರ್‌ ಜಯ ಶೆಟ್ಟಿ, ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ, ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ವಸಂತ್‌ ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ದಿನೇಶ್‌ ಶೆಟ್ಟಿ ಕಳತ್ತೂರು, ಸಂಘದ ಉಪಾಧ್ಯಕ್ಷರಾದ ಸುಧಾಕರ ಶೆಟ್ಟಿ, ರಾಮಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗ್ಡೆ, ಕೋಶಾಧಿಕಾರಿ ಎರ್ಮಾಳ್‌ ಚಂದ್ರಹಾಸ ಶೆಟ್ಟಿ, ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗದ ಸದಸ್ಯೆಯರು, ಪ್ರಾದೇಶಿಕ ಸಮಿತಿ ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.

Exit mobile version