Kundapra.com ಕುಂದಾಪ್ರ ಡಾಟ್ ಕಾಂ

ಪಾಲಿಶ್ ನೆಪದಲ್ಲಿ ಮಹಿಳೆಯ ಚಿನ್ನಕ್ಕೆ ಕನ್ನ. ಜನರಿಂದ ಬಿತ್ತು ಭರ್ಜರಿ ಗುನ್ನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ವಕ್ವಾಡಿ ಪೇಟೆ ಸಮೀಪ ಮಧ್ಯಾಹ್ನ ಒಬ್ಬೊಂಟಿ ಮಹಿಳೆ ಮನೆಗೆ ಬಂದ ಅಪರಿಚಿತ ವ್ಯಕ್ತಿಯೋರ್ವ ಉಚಿತ ಚಿನ್ನಾಭರಣ ಪಾಲೀಶ್ ಮಾಡುವ ನೆವದಲ್ಲಿ ಕಳವಿಗೆ ಯತ್ನಿಸಿದ್ದು, ಸಾರ್ವಜನಿಕರು ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಬಿಹಾರ ಮೂಲದ ರಾಮಚಂದ್ರ ಯಾದವ್ (32) ಚಿನ್ನ ಎಗರಿಸಲು ಹೋಗಿ ಸಿಕ್ಕಿಬಿದ್ದು, ಗೂಸಾ ತಿಂದ ವ್ಯಕ್ತಿ.

ವಕ್ವಾಡಿ ಬಾಬಿ ಭಂಡಾರಿ ಎಂಬವರ ಮನೆಗೆ ಬಂದ ಯಾದವ್ ಸಮೀಪದ ಕೋಟೇಶ್ವರದಲ್ಲಿ ಚಿನ್ನಾಭರಣ ಕೆಲಸ ಮಾಡಿಕೊಂಡಿದ್ದೇನೆ ಎಂದು ನಂಬಿಸಿದ್ದಾನೆ. ಉಚಿತ ಚಿನ್ನ ಫಾಲಿಶ್ ಮಾಡಿಕೊಡುವುದಾಗಿ ಮಹಿಳೆ ನಂಬಿಸಿದ್ದಾನೆ. ಯಾದವ್ ಮಾತು ನಂಬಿದ ಮಹಿಳೆ ತನ್ನ ಬಳಿಯಿದ್ದ ೩ ಪವನ್ ಮಾಂಗಲ್ಯ ಸರ ಹಾಗೂ ಒಂದೂವರೆ ಪವನ್ ಚಿನ್ನದ ಸರ ಕೊಟ್ಟಿದ್ದಾಳೆ. ಚಿನ್ನ ಪಡೆದ ಯಾದವ್ ಯಾವುದೋ ರಾಸಾಯನಿಕ ಮಿಶ್ರಿತ ನೀರಿಗೆ ಹಾಕಿ ಬೆಂಕಿಯಲ್ಲಿ ಕಾಯಿಸಿದ್ದಾನೆ. ಬಳಿಕ ಚಿನ್ನ ಬಾಬಿಗೆ ವಾಪಾಸ್ ಕೊಟ್ಟಿದ್ದಾನೆ. ಚಿನ್ನದ ಬಣ್ಣ ಸಂಪೂರ್ಣ ಮಾಸಿದ್ದು, ಸರ ಕೂಡ ತುಂಡಾಗಿತ್ತು. ಚಿನ್ನದ ಬಣ್ಣ ಮಾಸಿದ, ಸರ ತುಂಡಾದ ಬಗ್ಗೆ ಮಹಿಳೆ ಪ್ರಶ್ನೆಗೆ ಸಬೂಬು ಹೇಳಿ ಯಾದವ್ ತಪ್ಪಿಸಿಕೊಂಡಿದ್ದ. ಮಹಿಳೆ ಕೂಡಲೇ ಸಂಬಂಧಿಕರಿಗೆ ಸುದ್ದಿ ಮುಟ್ಟಿಸಿದ್ದಾಳೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಸುತ್ತಾ ಮುತ್ತಾ ಹುಡುಕಾಟ ನಡೆಸಿದ ಸಂತೋಷ್, ವಿ.ಕೆ. ರಾಘವೇಂದ್ರ, ಗಿರೀಶ್, ಚಂದ್ರ ಇವರಿಗೆ ಯಾದವ್ ಸಿಕ್ಕಿಬಿದ್ದಿದ್ದಾನೆ. ಅಷ್ಟರಲ್ಲೇ ಸೇರಿದ ಸಾರ್ವಜನಿಕರು ರಾಮಚಂದ್ರ ಯಾದವ್ ಹಿಗ್ಗಾಮುಗ್ಗಾ ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ.  ರಾಮಚಂದ್ರ ಯಾದವ್ ಮೊದಲು ಕೇರಳದಲ್ಲಿ ಫಾಲಿಶ್ ಕೆಲಸ ಹಾಗೂ ಟೈಲ್ಸ್ ಕೂರಿಸುವ ಕೆಲಸ ಮಾಡಿಕೊಂಡಿದ್ದು, ಸೋಮವಾರ ಕುಂದಾಪುರಕ್ಕೆ ಬಂದಿದ್ದ. ಚಿನ್ನ ಪಾಲೀಶ್ ನೆವದಲ್ಲಿ ಚಿನ್ನ ಎಗರಿಸಲು ಹೋಗಿ ಪೊಲೀಸ್ ಅತಿಥಿಯಾಗಿದ್ದಾನೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Exit mobile version